ತುಮಕೂರು:ನಿವೇಶನ ವಿವಾದಕ್ಕೆ ಸಂಬಂಧಪಟ್ಟಂತೆ ವೃದ್ಧನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಿವೇಶನ ವಿವಾದ: ವೃದ್ಧನ ಕೊಲೆ ಮಾಡಿದ್ದ ಮೂವರು ಆರೋಪಿಗಳ ಬಂಧನ - Tumkur Crime News
ತುಮಕೂರು ಜಿಲ್ಲೆಯಲ್ಲಿ ವೃದ್ಧನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೂವರು ಆರೋಪಿಗಳ ಬಂಧನ
ರವೀಶ, ಮನು, ಸಚಿನ್ ಬಂಧಿತ ಆರೋಪಿಗಳು. ಮೇ 13 ರಂದು ತುರುವೇಕೆರೆ ತಾಲೂಕಿನ ಮಲ್ಲಘಟ್ಟ ಕೆರೆ ಏರಿ ಮೇಲೆ ನಾಯಕನ ಕಟ್ಟ ಗ್ರಾಮದ ಶಂಕರಯ್ಯ ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನು, ಆರೋಪಿಗಳನ್ನು ಪೊಲೀಸರು ತಿಪಟೂರು ಪಟ್ಟಣದ ಕುಮಾರ್ ಆಸ್ಪತ್ರೆ ಬಳಿ ಬಂಧಿಸಿದ್ದಾರೆ.