ತುಮಕೂರು: ಕೆಲ ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಗೆ ಭಾರಿ ಪ್ರಮಾಣದ ಬೆಳೆ ಹಾನಿ ಸಂಭವಿಸಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇದೀಗ ಮಳೆಗಾಲದ ಆರಂಭದಲ್ಲೇ ಜನತೆಗೆ ಮಲೆರಾಯ ಶಾಕ್ ನೀಡಿದ್ದಾನೆ. ನಿನ್ನೆ ರಾತ್ರಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ನೂರಕ್ಕೂ ಅಧಿಕ ತೆಂಗಿನಮರಗಳು ಹಾಗೂ ಅಡಕೆ ಮರಗಳು ಧರೆಗುರುಳಿರುವ ಘಟನೆ ಗುಬ್ಬಿ ತಾಲೂಕಿನ ಕಸಬ ಹೋಬಳಿ ಕಳ್ಳಿಪಾಳ್ಯ ಗ್ರಾಮದಲ್ಲಿ ನಡೆದಿದೆ.
ತುಮಕೂರಿನಲ್ಲಿ ಭಾರಿ ಮಳೆ..ಧರೆಗುರುಳಿದ ಅಡಕೆ, ತಂಗಿನ ಮರಗಳು..ರೈತರು ಕಂಗಾಲು! - ಧರೆಗುರುಳಿದ ಮರಗಳು
ಗುಬ್ಬಿ ತಾಲೂಕಿನ ಕಸಬ ಹೋಬಳಿ ಕಳ್ಳಿಪಾಳ್ಯ ಗ್ರಾಮದಲ್ಲಿ ನಿನ್ನೆ ರಾತ್ರಿ ಗಾಳಿ ಸಹಿತ ಜೋರು ಮಳೆಯಾದ ಪರಿಣಾಮ ತೆಂಗಿನಮರಗಳು ಹಾಗೂ ಅಡಕೆಮರಗಳು ಧರೆಗುರುಳಿವೆ.
![ತುಮಕೂರಿನಲ್ಲಿ ಭಾರಿ ಮಳೆ..ಧರೆಗುರುಳಿದ ಅಡಕೆ, ತಂಗಿನ ಮರಗಳು..ರೈತರು ಕಂಗಾಲು! rain in tumkur](https://etvbharatimages.akamaized.net/etvbharat/prod-images/768-512-15469795-thumbnail-3x2-sgfrtf.jpg)
ತುಮಕೂರಿನಲ್ಲಿ ಭಾರಿ ಮಳೆ
ಭಾರಿ ಮಳೆಗೆ ಧರೆಗುರುಳಿದ ಮರಗಳು
ರಾತ್ರಿ ಆರಂಭವಾದ ಮಳೆ ಜೊತೆಗೆ ಬೀಸಿದ ಜೋರು ಗಾಳಿಗೆ ತೆಂಗಿನಮರಗಳ ಅಕ್ಕಪಕ್ಕದಲ್ಲಿದ್ದ ಅಡಕೆ ಮರಗಳು ಸಹ ನೆಲಕ್ಕುರುಳಿದೆ. ದಿಢೀರ್ ಬೀಸಿದ ಗಾಳಿಯ ರಭಸಕ್ಕೆ ಫಲ ನೀಡುವ ಅಡಕೆ ಮರಗಳು ನೆಲ ಕಚ್ಚಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ರೈತರ ದನದ ಕೊಟ್ಟಿಗೆ, ಮನೆ ಮತ್ತು ತೆಂಗಿನ ಕಾಯಿ ಶೆಡ್ಗಳ ಛಾವಣಿಗಳು ಹಾರಿಹೋಗಿವೆ. ನಂಜುಂಡ ಅವರ ಮನೆ ಹೆಂಚು ಬಿದ್ದು ಅವರ ತಲೆಗೆ ಪೆಟ್ಟಾಗಿದೆ.
ಇದನ್ನೂ ಓದಿ:ಕಂಬಿಗಳ ಹಿಂದಿನ ಅಮ್ಮನ ನೆನಪು: ಕಣ್ಣೀರು ಹಾಕಿದ ಸಜಾ ಬಂಧಿಗಳು
Last Updated : Jun 4, 2022, 12:16 PM IST