ತುಮಕೂರು:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿನ್ನೆ ಬೆಂಗಳೂರು ಚಲೋ ಜಾಥಾ ಹೊರಟಿದ್ದ ಅಂಗನವಾಡಿ ಕಾರ್ಯಕರ್ತೆಯರನ್ನು ತುಮಕೂರಿನಲ್ಲಿ ಪೊಲೀಸರು ತಡೆಹಿಡಿದಿದ್ದು, ಪ್ರತಿಭಟನಾನಿರತರು ರಸ್ತೆ ಬದಿಯಲ್ಲಿ ಅಡುಗೆ ಮಾಡಿ ತಿಂದಿದ್ದಾರೆ.
ತುಮಕೂರಿನಲ್ಲಿ ತಡೆದ ಪೊಲೀಸರು: ರಸ್ತೆಬದಿಯಲ್ಲೇ ಅಡುಗೆ ಮಾಡಿದ ಅಂಗನವಾಡಿ ಕಾರ್ಯಕರ್ತೆಯರು - ಬೆಂಗಳೂರು ಚಲೋ ಜಾಥಾ
ಬೆಂಗಳೂರು ಚಲೋಗೆ ಕರೆ ಕೊಟ್ಟಿದ್ದ ಅಂಗನವಾಡಿ ಕಾರ್ಯಕರ್ತೆಯರನ್ನು ನಿನ್ನೆ ತುಮಕೂರಿನಲ್ಲಿ ಪೊಲೀಸರು ತಡೆದಿದ್ದರ ಪರಿಣಾಮವಾಗಿ ಪ್ರತಿಭಟನಾನಿರತರು ರಸ್ತೆ ಬದಿಯಲ್ಲಿ ಅಡುಗೆ ಮಾಡಿ ತಿಂದಿದ್ದಾರೆ.

ತುಮಕೂರಿನ ಗಾಜಿನಮನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು
ತುಮಕೂರಿನ ಗಾಜಿನಮನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು
ನಿನ್ನೆ ರಾತ್ರಿ ತುಮಕೂರು ನಗರದ ಗಾಜಿನಮನೆ ಆವರಣದಲ್ಲಿ ಸಾವಿರಾರು ಪ್ರತಿಭಟನಾಕಾರರು ಉಳಿದುಕೊಂಡಿದ್ದರು. ರಸ್ತೆ ಬದಿಯಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಗಾಜಿನ ಮನೆ ಆವರಣದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.