ಕರ್ನಾಟಕ

karnataka

ETV Bharat / state

ಲೋಕ ಅದಾಲತ್​​: ದಶಕಗಳ ವಿರಸ ದೂರ, ವೃದ್ಧಾಪ್ಯದಲ್ಲಿ ಒಂದಾದ ದಂಪತಿಯ ಬಾಳಲ್ಲಿ ಪ್ರಣಯ ರಾಗ - ಲೋಕ ಅದಾಲತ್

ವೈಯಕ್ತಿಕ ಕಾರಣದಿಂದ ಬೇರೆಯಾಗಿದ್ದ ದಂಪತಿ ಭಾನುವಾರ ನಡೆದ ಲೋಕ ಅದಾಲತ್​ನಲ್ಲಿ ಒಂದಾಗಿದ್ದಾರೆ. ಬರೋಬ್ಬರಿ 69ನೇ ವಯಸ್ಸಿನಲ್ಲಿ ವೃಯೋವೃದ್ಧರಿಬ್ಬರು ಒಂದಾಗಿರುವ ಘಟನೆ ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.

ವೃದ್ಧ ದಂಪತಿ
ವೃದ್ಧ ದಂಪತಿ

By

Published : Nov 13, 2022, 8:14 PM IST

ತುಮಕೂರು:ದಶಕಗಳಿಂದ ವೈಯಕ್ತಿಕ ಕಾರಣದಿಂದ ಬೇರೆಯಾಗಿದ್ದ ದಂಪತಿ, ತಮ್ಮ 69ನೇ ವಯಸ್ಸಿನಲ್ಲಿ ಮತ್ತೆ ಒಂದಾಗಿದ್ದಾರೆ. ಅದು ಕೂಡ ಲೋಕ ಅದಾಲತ್​ ಮೂಲಕ. ಇಂತಹ ಒಂದು ಅಪರೂಪದ ಘಟನೆ ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.

ಈ ದಂಪತಿಗೆ ಓರ್ವ ಮಗಳಿದ್ದು, ಆಕೆಗೆ ಮದುವೆಯಾಗಿದೆ. ಅಲ್ಲದೇ 15 ವರ್ಷದ ಮೊಮ್ಮಗ ಸಹ ಇದ್ದಾನೆ. ಇದೀಗ ಗುರುಹಿರಿಯರು ಹಾಗೂ ನ್ಯಾಯಾಲಯದ ಸಮ್ಮುಖದಲ್ಲಿ ಪುನಃ ದಂಪತಿ ದಾಂಪತ್ಯ ಜೀವನಕ್ಕೆ ವಾಪಸ್ ಆಗಿದ್ದಾರೆ.

ನ್ಯಾಯಾಲಯದಲ್ಲಿ ಬಾಕಿ ಇದ್ದ ವಿವಿಧ ಪ್ರಕರಣಗಳಲ್ಲಿ 5 ಜೋಡಿಗಳನ್ನು ಪುನಃ ಒಂದು ಮಾಡಲಾಗಿದೆ. ದಂಪತಿ ಹಾರ ಬದಲಾಯಿಸಿಕೊಂಡು, ಒಬ್ಬರಿಗೊಬ್ಬರು ಸಿಹಿ ತಿನ್ನಿಸಿದ ಅಪರೂಪದ ಪ್ರಸಂಗಕ್ಕೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಸಾಕ್ಷಿಯಾಗಿದೆ.

ಇಂದು ನಡೆದ ಲೋಕ ಅದಾಲತ್​ನಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳಲ್ಲಿ ದಂಪತಿಗೆ ಚಿಕ್ಕ ಚಿಕ್ಕ ಮನಸ್ತಾಪ, ವೈಮನಸ್ಸುಗಳು ಇದ್ದವು. ಅದಕ್ಕೆ ಜೀವನಾಂಶ, ವಿಚ್ಛೇದನಕ್ಕೆ ಅರ್ಜಿ ಹಾಕಿ ನ್ಯಾಯಾಲಯಕ್ಕೆ ಬಂದಿದ್ದ ಐವರು ದಂಪತಿಗಳನ್ನು ನ್ಯಾಯಾಧೀಶರು, ಮಧ್ಯಸ್ಥಿಕೆದಾರರು, ಎರಡೂ ಕಡೆಯ ವಕೀಲರು ಸೇರಿ ಬುದ್ಧಿ ಹೇಳಿ ಒಂದು ಮಾಡಿದ್ದಾರೆ.

ಇದನ್ನೂ ಓದಿ:13 ವರ್ಷಗಳಿಂದ ದೂರ ದೂರ.. ಲೋಕ್​ ಅದಾಲತ್​ನಿಂದ ದಂಪತಿ ಪುನರ್ ​ಮಿಲನ್​

ABOUT THE AUTHOR

...view details