ತುಮಕೂರು:ಶಿರಾ ತಾಲೂಕಿನ ಕೊರೊನಾ ಆರೈಕೆ ಕೇಂದ್ರವೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವೃದ್ದೆಯೊಬ್ಬರು ತೀವ್ರ ನಿತ್ರಾಣಗೊಂಡು ಒದ್ದಾಡುತ್ತಿದ್ದಾಗ ಅವರನ್ನು ಆಸ್ಪತ್ರೆಗೆ ಸಾಗಿಸಲು ಯಾವುದೇ ವ್ಯವಸ್ಥೆ ಇಲ್ಲದ ವೇಳೆ ಆ್ಯಂಬುಲೆನ್ಸ್ ಚಾಲಕ ಯೋಗೇಶ್ ಎಂಬುವವರು ವೃದ್ಧೆಯನ್ನು ಕೈಗೆತ್ತಿಕೊಂಡು ವಾಹನದಲ್ಲಿ ಕೂರಿಸಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿರುವ ವಿಡಿಯೋ ವೈರಲ್ ಆಗಿದೆ.
ಶಿರಾ ನಗರದ ಹೊರವಲಯದ ಬೂವನಹಳ್ಳಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ವೃದ್ಧೆಯೊಬ್ಬರು ವಾಂತಿ ಮಾಡಿಕೊಂಡು ಚಿಕಿತ್ಸೆಗೆ ಅಂಗಲಾಚುತ್ತಿದ್ದರು. ಈ ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಶಿರಾ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಬೇಕಿತ್ತು.