ತುಮಕೂರು:ರಭಸವಾಗಿ ಹರಿಯುತ್ತಿದ್ದ ಮಳೆ ನೀರಿನಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ಆಂಧ್ರಪ್ರದೇಶದ ಕೃಷಿ ಅಧಿಕಾರಿಯನ್ನು ಪಾವಗಡ ತಾಲೂಕಿನ ಸಿಕೆಪುರ ಗ್ರಾಮದ ಬಳಿ ಜನರು ರಕ್ಷಿಸಿದರು.
ಕೃಷಿ ಅಧಿಕಾರಿ ಮೋಹನ್ ನಾಯಕ ಎಂಬುವವರು ಬೈಕ್‌ನಲ್ಲಿ ಗುಡಿಬಂಡೆ ಗ್ರಾಮದಿಂದ ಸಿಕೆ ಪುರ ಮಾರ್ಗವಾಗಿ ಆಂಧ್ರದ ರಾಮಗಿರಿಯ ಎನ್ಹೆಚ್ ಗೇಟ್‌ಗೆ ತೆರಳುತ್ತಿದ್ದರಂತೆ. ಈ ವೇಳೆ ದೊಡ್ಡ ಹಳ್ಳದಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಅವರು ನಂತರ ಮಧ್ಯದಲ್ಲಿ ಸಿಕ್ಕ ಮರ ಹಿಡಿದು ಮರವೇರಿ ಪ್ರಾಣ ರಕ್ಷಿಸಿಕೊಂಡಿದ್ದರು. ಇವರ ಕೂಗಾಟ, ಚೀರಾಟ ಕಂಡ ಸ್ಥಳೀಯ ಗ್ರಾಮಸ್ಥರು ಸಮೀಪ ತೆರಳಿ, ಹಗ್ಗದ ಸಹಾಯದಿಂದ ಪ್ರಾಣ ಕಾಪಾಡಿದ್ದಾರೆ.