ಕರ್ನಾಟಕ

karnataka

ETV Bharat / state

ಬಹಿರಂಗ ಪ್ರಚಾರ ಅಂತ್ಯ, ತುಮಕೂರಿನಲ್ಲಿ ಅಭ್ಯರ್ಥಿ ಪರ 'ಅಮಿತ' ಉತ್ಸಾಹ - tumkur

ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ನಡೆಸಿ ಅಂತಿಮ ಹಂತದ ಮತಯಾಚನೆ ನಡೆಸಿದರು.

ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಅಮಿತ್ ಶಾ ರೋಡ್ ಶೋ

By

Published : Apr 16, 2019, 7:01 PM IST

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್‌ ಬಸವರಾಜ್‌ ಪರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ನಡೆಸಿ ಕೊನೆಯ ಹಂತದ ಮತಬೇಟೆ ನಡೆಸಿದರು.

ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಅಮಿತ್ ಶಾ ರೋಡ್ ಶೋ

ನಗರ ಟೌನ್‌ಹಾಲ್ ಸರ್ಕಲ್‌ನಿಂದ ಆರಂಭಗೊಂಡ ರೋಡ್ ಶೋ ಎಂಜಿ ರಸ್ತೆ ಮೂಲಕ ಗುಮಾಚಿ ಸರ್ಕಲ್‌ವರೆಗೂ ಸಾಗಿತು. ಈ ವೇಳೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದರು.

ಈ ವೇಳೆ ಬಿಜೆಪಿ ಅಭ್ಯರ್ಥಿ ಜಿ. ಎಸ್ ಬಸವರಾಜ್, ಮಾಜಿ ಸಚಿವರಾದ ಸೊಗಡು ಶಿವಣ್ಣ ಹಾಗು ಮಾಜಿ ಶಾಸಕ ಸುರೇಶ್ ಗೌಡ ಮತ್ತಿತರರು ಹಾಜರಿದ್ದರು.

For All Latest Updates

TAGGED:

tumkur

ABOUT THE AUTHOR

...view details