ತುಮಕೂರು: ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಗೂ ನಾನು ಸೇರಿ ಹಿಂದಿನ ಮೈತ್ರಿ ಸರ್ಕಾರ ಬೀಳಿಸಿದ್ವಿ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಕೆ.ಎನ್.ರಾಜಣ್ಣ ಜೊತೆ ಸೇರಿ ಮೈತ್ರಿ ಸರ್ಕಾರ ಬೀಳಿಸಿದ್ವಿ: ಸಚಿವ ರಮೇಶ್ ಜಾರಕಿಹೊಳಿ - Alliance government
ಕೆ.ಎನ್.ರಾಜಣ್ಣ ಮತ್ತು ನಾನು ಸೇರಿ ಹಿಂದಿನ ಮೈತ್ರಿ ಸರ್ಕಾರ ಬೀಳಿಸಿದ್ವಿ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತುಮಕೂರಿನಲ್ಲಿ ಹೇಳಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳಿಸಲು ಒಂದು ಉದ್ದೇಶ ಇತ್ತು. ಹಾಗಾಗಿ ಕೆ.ಎನ್.ರಾಜಣ್ಣ ಅವರು ಕೈ ಜೋಡಿಸಿ ಸರ್ಕಾರ ಬೀಳಿಸಿದ್ರು. ಸರ್ಕಾರದ ಪತನದ ಬಗ್ಗೆ ಲೋಕಸಭೆ ಚುನಾವಣೆ ವೇಳೆ ರಾಜಣ್ಣ ಹೇಳಿಕೆ ಕೊಟ್ಟಿದ್ರು ಎಂದರು.
ರಾಜಣ್ಣಗೆ ಬಿಜೆಪಿಗೆ ಬರಲು ಹೇಳಿದ್ವಿ. ಆದರೆ ರಾಜಣ್ಣ ಬಂದಿಲ್ಲ. ನಾನು ಬಾಲ್ಯದಿಂದಲೂ ಕಾಂಗ್ರೆಸ್ನಲ್ಲಿ ಇದ್ದೋನು, ಬಿಟ್ಟು ಬಿಜೆಪಿಗೆ ಬರಲಿಲ್ಲವೇ ಎಂದರು.