ತುಮಕೂರು :ಯೋಜನೆ ಕುರಿತು ಮಾಹಿತಿ ಪಡೆಯಲು ಬಂದ ಅಲೆಮಾರಿ ಸಮುದಾಯದ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ತಹಶೀಲ್ದಾರ್ ತೇಜಸ್ವಿನಿ ವಿರುದ್ಧ ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ವಿರುದ್ಧ ಎಫ್ಐಆರ್ ತಾಲೂಕಿನ ಕೇದಿಗೆಹಳ್ಳಿ ಗುಂಡು ತೋಪಿನಲ್ಲಿ ಆಶ್ರಯ ಪಡೆದಿರುವ ಅಲೆಮಾರಿ ಸಮುದಾಯದ ಕುಟುಂಬಗಳು ಮಳೆಯಿಂದ ಮನೆ ಕಳೆದುಕೊಂಡು ಬೀದಿಗೆ ಬಿದ್ದಿತ್ತು.
ಸರ್ಕಾರ ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ತೆರೆದಿದ್ದ ಗಂಜಿ ಕೇಂದ್ರದಲ್ಲಿ ಅಲೆಮಾರಿ ಕುಟುಂಬಗಳಿಗೆ ಆಶ್ರಯ ನೀಡಿತ್ತು. ಮಳೆ ಕಡಿಮೆಯಾದ ಬಳಿ ತಹಶೀಲ್ದಾರ್ ತೇಜಸ್ವಿನಿ ಈ ಕುಟುಂಬಗಳಿಗೆ ದಬ್ಬೇಘಟ್ಟಕ್ಕೆ ತೆರಳುವಂತೆ ಸೂಚಿಸಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈ ವೇಳೆ ನರಸಮ್ಮ ಎಂಬ ಮಹಿಳೆ ನಾವು ಮನುಷ್ಯರಲ್ಲವೇ?. ಕಾಡಿನಂತಹ ಪ್ರದೇಶದಲ್ಲಿ ವಾಸಿಸಲು ಸಾಧ್ಯವೇ?. ಮೂಲಸೌಕರ್ಯ ಒದಗಿಸಿ ಕೊಡಿ ಎಂದು ಮನವಿ ಮಾಡಿದ್ದರು.
ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ವಿರುದ್ಧ ಎಫ್ಐಆರ್ ಅದಕ್ಕೆ ಸಿಟ್ಟಾದ ತೇಜಸ್ವಿನಿ ಕಚೇರಿ ಸಿಬ್ಬಂದಿ, ಪೊಲೀಸರನ್ನು ಕರೆದು ಆಕೆಯನ್ನು ಹೊರ ಕಳುಹಿಸುವಂತೆ ಸೂಚಿಸಿದ್ದರು. ಅಲ್ಲದೇ ತಂದೆಯ ಆಧಾರ್ ಕಾರ್ಡ್ ಅನ್ನು ಕಪ್ಪು ಪಟ್ಟಿಗೆ ಸೇರಿಸಿ ಸರ್ಕಾರಿ ಸೌಲಭ್ಯ ತಡೆಹಿಡಿಯುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾದ ಆಡಿಯೋ ವೈರಲ್ ಆಗಿತ್ತು.
ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ವಿರುದ್ಧ ಎಫ್ಐಆರ್ ಈ ಬಗ್ಗೆ ಪರಮೇಶ್ ಎಂಬುವರು ಡಿಐಜಿ ಮತ್ತು ಎಸ್ಪಿ ಅವರಿಗೆ ದೂರು ನೀಡಿದ್ದರು. ಇದೀಗ ತಹಶೀಲ್ದಾರ್ ತೇಜಸ್ವಿನಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಸಹ ನಟಿಗೆ ವಂಚನೆ ಆರೋಪ: ಸ್ಯಾಂಡಲ್ವುಡ್ ನಟ ಕಂ ನಿರ್ಮಾಪಕ ಹರ್ಷವರ್ಧನ್ ಅರೆಸ್ಟ್