ಕರ್ನಾಟಕ

karnataka

ETV Bharat / state

ತುಮಕೂರು ಪಾಲಿಕೆ ಮಹಿಳಾ ಸಿಬ್ಬಂದಿಗೆ ಕಿರುಕುಳ ಆರೋಪ : ನಾಲ್ವರಿಗೆ ಥಳಿತ - ಈಟಿವಿ ಭಾರತ ಕನ್ನಡ

ಪತ್ರಕರ್ತರ ಸೋಗಿನಲ್ಲಿ ತುಮಕೂರು ಮಹಾನಗರ ಪಾಲಿಕೆಯ ಮಹಿಳಾ ಸಿಬ್ಬಂದಿಗೆ ಬ್ಲಾಕ್​ಮೇಲ್​ ಮಾಡಿದ ಆರೋಪಿಗಳನ್ನು ಸಾರ್ವಜನಿಕರು ಥಳಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

allegation-of-blackmail-to-tumkur-corporation-office-staff
ತುಮಕೂರು ಪಾಲಿಕೆ ಮಹಿಳಾ ಸಿಬ್ಬಂದಿಗೆ ಕಿರುಕುಳ ಆರೋಪ : ನಾಲ್ವರಿಗೆ ಥಳಿತ

By

Published : Oct 1, 2022, 4:21 PM IST

ತುಮಕೂರು : ಪತ್ರಕರ್ತರ ಸೋಗಿನಲ್ಲಿ ಇಲ್ಲಿನ ಮಹಾನಗರ ಪಾಲಿಕೆ ಸಿಬ್ಬಂದಿಯನ್ನು ಬ್ಲಾಕ್​ ಮೇಲ್​ ಮಾಡಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕರು ಕಳೆದ ಬಾರಿಯ ಬಿಗ್ ಬಾಸ್ ವಿನ್ನರ್ ಪಾವಗಡ ಮಂಜು ಸಹೋದರ ಪಾವಗಡ ಪ್ರದೀಪನಿಗೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಇದಲ್ಲದೇ ಮಾನವ ಹಕ್ಕುಗಳ ಕಾರ್ಯಕರ್ತರು ಎಂದು ಹೇಳಿಕೊಂಡು ಬಂದಿದ್ದ ಯುವತಿಯರಿಗೂ ಸಾರ್ವಜನಿಕರು ಥಳಿಸಿದ್ದಾರೆ.

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಜೀವನೋಪಾಯ ಕೇಂದ್ರದಲ್ಲಿ ಮಹಿಳೆಯೊಬ್ಬರಿಗೆ ಪ್ರದೀಪ್​ ಬ್ಲಾಕ್​ಮೇಲ್​ ಮಾಡಿದ್ದಲ್ಲದೇ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

ತುಮಕೂರು ಪಾಲಿಕೆ ಮಹಿಳಾ ಸಿಬ್ಬಂದಿಗೆ ಕಿರುಕುಳ ಆರೋಪ : ನಾಲ್ವರಿಗೆ ಥಳಿತ

ಪತ್ರಕರ್ತರ ಸೋಗಿನಲ್ಲಿ ಪಾಲಿಕೆ ಸಿಬ್ಬಂದಿಗೆ ಬ್ಲಾಕ್​ಮೇಲ್​ : ಈ ಹಿಂದೆ ಪ್ರದೀಪ್​ ಮಹಾನಗರ ಪಾಲಿಕೆ ಮಹಿಳಾ ಸಿಬ್ಬಂದಿಗೆ ಹಣದ ಆಮಿಷ ತೋರಿದ್ದಾನೆ. ಅಲ್ಲದೇ ಇದನ್ನು ಚಿತ್ರೀಕರಿಸಿಕೊಂಡು ನಾಲ್ಕು ಲಕ್ಷ ರೂಪಾಯಿ ಹಣ ನೀಡಬೇಕು. ಇಲ್ಲದಿದ್ದರೆ ಅದನ್ನು ಈ ದೃಶ್ಯವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಇದರಿಂದ ಬೇಸತ್ತ ಮಹಿಳೆ ಹಿರಿಯ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಅಲ್ಲದೆ ಮಹಿಳಾ ಸಿಬ್ಬಂದಿಯಿಂದ ಹಣ ಪಡೆಯಲು ಬಂದಿದ್ದ ಪ್ರದೀಪ್​ ಹಾಗೂ ಇನ್ನು ಮೂವರು ಮಹಿಳೆಯರನ್ನು ಅಡ್ಡ ಹಾಕಿದ ಪಾಲಿಕೆಯ ಸಿಬ್ಬಂದಿ ಎಲ್ಲರಿಗೂ ಥಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ನಗರ ಠಾಣಾ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ :ಐಸಿಯುನಲ್ಲಿದ್ದ ಅಜ್ಜಿಯನ್ನು ಸಬ್​ ರಿಜಿಸ್ಟರ್ ಕಚೇರಿಗೆ ಕರೆತಂದು ಆಸ್ತಿ ಪತ್ರಕ್ಕೆ ಸಹಿ: ಬೆಳಗಾವಿಯಲ್ಲೊಂದು ಘಟನೆ

ABOUT THE AUTHOR

...view details