ಕರ್ನಾಟಕ

karnataka

ETV Bharat / state

ಎಲ್ಲ ಕಾನೂನುಬಾಹಿರ ಗಣಿಗಾರಿಕೆಗಳಿಗೆ ಸಚಿವರ ಸಹಕಾರ ಇದೆ: ಶಾಸಕ ಡಿ.ಸಿ. ಗೌರಿಶಂಕರ್

ಸರ್ಕಾರದ ನಿಯಮಗಳನ್ನು ಮೀರಿ ಜಿಲೆಟಿನ್​​ಗಳನ್ನು ಉಪಯೋಗಿಸುತ್ತಿದ್ದರೂ, ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ನಮ್ಮಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳೆಲ್ಲಾ ಕಾನೂನು ಬಾಹಿರವಾಗಿವೆ. ಇದ್ರಲ್ಲಿ ಅಧಿಕಾರಿಗಳು, ಜಿಲ್ಲಾಧಿಕಾರಿ, ಕಮಿಟಿ ಕೂಡ ಭಾಗಿಯಾಗಿ ಅವ್ಯವಹಾರ ನಡೆಯುತ್ತಿದೆ ಎಂದು ಶಾಸಕ ಡಿ.ಸಿ. ಗೌರಿಶಂಕರ್ ಆರೋಪ ಮಾಡಿದ್ದಾರೆ.

MLA D C Gourishankar
ಶಾಸಕ ಡಿ.ಸಿ. ಗೌರಿಶಂಕರ್

By

Published : Jan 24, 2021, 7:06 AM IST

Updated : Jan 24, 2021, 9:07 AM IST

ತುಮಕೂರು: ತಾಲೂಕಿನ ವ್ಯಾಪ್ತಿಯಲ್ಲಿ ಜಿಲೆಟಿನ್ ಉಪಯೋಗಿಸಿ ಬ್ಲಾಸ್ಟ್ ಮಾಡಲಾಗುತ್ತಿದೆ. ಕ್ರಷರ್ ಮಾಲೀಕರೆಲ್ಲಾ ಘಟಾನುಘಟಿಗಳು. ಇದಕ್ಕೆ ಎಲ್ಲಾ ಸಚಿವರ ಸಹಕಾರ ಇದೆ ಎಂದು ಶಾಸಕ ಡಿ.ಸಿ. ಗೌರಿಶಂಕರ್ ಆರೋಪಿದ್ದಾರೆ.

ಶಾಸಕ ಡಿ.ಸಿ. ಗೌರಿಶಂಕರ್

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿಯಮಗಳನ್ನು ಮೀರಿ ಜಿಲೆಟಿನ್​​ಗಳನ್ನು ಉಪಯೋಗಿಸುತ್ತಿದ್ದರೂ, ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಆರೋಪಿಸಿದರು. ನಮ್ಮಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳೆಲ್ಲಾ ಕಾನೂನು ಬಾಹಿರವಾಗಿವೆ. ಇದರಲ್ಲಿ ಅಧಿಕಾರಿಗಳು, ಜಿಲ್ಲಾಧಿಕಾರಿ, ಕಮಿಟಿ ಕೂಡ ಭಾಗಿಯಾಗಿ ಅವ್ಯವಹಾರ ನಡೆಯುತ್ತಿದೆ ಎಂದಿದ್ದಾರೆ.

ಓದಿ:ಐತಿಹಾಸಿಕ ದೇಗುಲಗಳಿಗೆ ಗಣಿಗಾರಿಕೆಯಿಂದ ಹಾನಿಯಾಗದಂತೆ ಕ್ರಮ: ಸಚಿವ ಪೂಜಾರಿ ಭರವಸೆ

ಜಿಲೆಟಿನ್ ಉಪಯೋಗಿಸಲು ಅನುಮತಿ ಇಲ್ಲ. ಕರ್ನಾಟಕದಲ್ಲಿ ಕ್ರಷರ್ ಮಾಡಿರುವವರು ಯಾರು ನಿಯಮಗಳ ಪ್ರಕಾರ ನಡೆದುಕೊಳ್ಳುತ್ತಿಲ್ಲ. ಹಳ್ಳಿಗಳ ಕಡೆ ಇಂತಹ ಘಟನೆಗಳು ಸಾಕಷ್ಟಿವೆ. ಡೀಮ್ ಫಾರೆಸ್ಟ್ ಒತ್ತುವರಿ ಮಾಡಿ ಸರ್ಕಾರಕ್ಕೆ ನೂರಾರು ಕೋಟಿ ನಷ್ಟ ಮಾಡಿದ್ದಾರೆ. ಈ ಬಗ್ಗೆ ನಾನು ಸರ್ಕಾರಕ್ಕೆ, ಅಧಿಕಾರಿಗಳಿಗೆ ದಾಖಲೆ ಸಮೇತ ದೂರು ಕೊಟ್ಟರೂ ಪ್ರಯೋಜನವಿಲ್ಲದಂತಾಗಿದೆ. ನನ್ನ ಪ್ರಕಾರ ಶೇ. 80ರಷ್ಟು ಕ್ರಷರ್ ಡೀಮ್ ಫಾರೆಸ್ಟ್​​ನಲ್ಲಿ ನಡೀತಾ ಇದೆ. ದಾಖಲೆ ಇದ್ದರೂ ಸರ್ಕಾರ ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಸಕ ಗೌರಿಶಂಕರ್​ ದೂರಿದ್ದಾರೆ.

Last Updated : Jan 24, 2021, 9:07 AM IST

ABOUT THE AUTHOR

...view details