ತುಮಕೂರು: ಬಿಸಿಯೂಟ ತಯಾರಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಿಂಗಳ 21 ಮತ್ತು 22ರಂದು ಬೆಂಗಳೂರು ಚಲೋ ಮತ್ತು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಶಿವಣ್ಣ ತಿಳಿಸಿದರು.
ಜ. 21, 22 ರಂದು ಬಿಸಿಯೂಟ ತಯಾರಕರ ಅಹೋರಾತ್ರಿ ಧರಣಿ - AITUC Secretary General of State Shivanna
ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಿಂಗಳ 21 ಮತ್ತು 22ರಂದು ಬೆಂಗಳೂರು ಚಲೋ ಮತ್ತು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಿಸಲು ಅಕ್ಷರದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಹಿನ್ನೆಲೆಯಲ್ಲಿ ಅಂದಿನಿಂದಲೂ ಶಾಲೆಗಳಲ್ಲಿ ಬಿಸಿಯೂಟ ತಯಾರಕರಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವ ಬಿಸಿಯೂಟ ತಯಾರಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಬೇಕು. ಶಾಲೆಗಳಲ್ಲಿ ಅಡುಗೆ ಮಾಡುವ ಸಿಬ್ಬಂದಿವರ್ಗದವರಿಗೆ ಕನಿಷ್ಠ ವೇತನವೂ ಇಲ್ಲದೆ ಯಾವುದೇ ರೀತಿಯ ಸೌಲಭ್ಯಗಳು ದೊರೆಯುತ್ತಿಲ್ಲ, ಕೆಲಸದ ಭದ್ರತೆ ಇಲ್ಲ, ಇಎಸ್ಐ, ಪಿಂಚಣಿ ಸೌಲಭ್ಯಗಳು ಇಲ್ಲದೆ ಇರುವಂತಹದ್ದು ಶೋಚನೀಯ ವಿಷಯವಾಗಿದೆ. ಮುಖ್ಯ ಅಡುಗೆ ತಯಾರಕರಿಗೆ 2,700ರೂ, ಅಡುಗೆ ಇತರೆ ಸಿಬ್ಬಂದಿಗಳಿಗೆ 2,600ರೂ ಸಂಬಳ ನೀಡಲಾಗುತ್ತದೆ.
ಹೀಗಾಗಿ ಅಡುಗೆ ಸಿಬ್ಬಂದಿಗಳಿಗೆ 21,000 ವೇತನ ನೀಡಬೇಕು, ಅಡುಗೆ ಮಾಡುವ ಸಮಯದಲ್ಲಿ ತೊಂದರೆಗೊಳಗಾಗಿ ಅಪಘಾತವಾದರೆ 5 ಲಕ್ಷ ಪರಿಹಾರ ನೀಡಬೇಕು, 10,000 ಪಿಂಚಣಿ ನೀಡಬೇಕು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೋರಾಟ ನಡೆಸಲಾಗುವುದು ಇದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ ಎಂದು ಇದೇ ವೇಳೆ ತಿಳಿಸಿದರು.