ಕರ್ನಾಟಕ

karnataka

ETV Bharat / state

ಡಿಸಿ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಆರೋಪಿ ಬಂಧನ - accused arrested in job fraud at Tumkur district

ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Arrested for Fraud in Tumkur district
ಆರೋಪಿ ಬಂಧನ

By

Published : Feb 15, 2021, 3:18 PM IST

ತುಮಕೂರು:ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಮಹಿಳೆಯನ್ನು ಬಂಧಿಸಿರುವ ಪೊಲೀಸರು, ಆರೋಪಿಯಿಂದ ₹1.20 ಲಕ್ಷ ನಗದು, ಮೊಬೈಲ್ ಫೋನ್ ಹಾಗೂ ಅಂಕಪಟ್ಟಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಸೌಮ್ಯಾ ಬಂಧಿತ ಆರೋಪಿ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ, ಎಸಿ ಹಾಗೂ ಉಪವಿಭಾಗಾಧಿಕಾರಿಗಳ ಆಪ್ತ ಸಹಾಯಕರ ಹುದ್ದೆಗಳು ಖಾಲಿಯಿವೆ. ಅವುಗಳನ್ನು ನಿಮಗೆ ಕೊಡಿಸುತ್ತೇನೆ ಎಂದು ಬೆಂಗಳೂರಿನ ತಿಮ್ಮರಾಜು, ಸಂದೀಪ ಕುಮಾರ್, ರಾಜೇಶ್, ರಶ್ಮಿ ಅವರಿಂದ ಹಣವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ...ಇಂದಿನಿಂದ ಫಾಸ್ಟ್​​ಟ್ಯಾಗ್​ ಕಡ್ಡಾಯ: ಟೋಲ್​​ಗಳಲ್ಲಿ ಹದ್ದಿನ ಕಣ್ಣು

ವಂಚನೆಗೊಳಗಾದ ರಾಜೇಶ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆಕೆಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ವಿಚಾರಣೆ ಆರಂಭಿಸಿದ್ದಾರೆ.

ABOUT THE AUTHOR

...view details