ತುಮಕೂರು :ಬೈಕ್ ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ಗಾಯಾಳುಗಳನ್ನು ಶಿರಾ ಶಾಸಕ ಡಾ. ರಾಜೇಶ್ ಗೌಡ ಅವರು ತಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಶಿರಾ ತಾಲೂಕಿನ ಅಮರಾಪುರ ರಸ್ತೆಯಲ್ಲಿ ಬರುವ ತೋಗರುಗುಂಟೆ ಗೇಟ್ ಬಳಿ ಮರಲೂರು ಗ್ರಾಮದ ಭೂತರಾಜು ಮತ್ತು ಓಬಣ್ಣ ಬೈಕ್ನಲ್ಲಿ ತೆರಳುವಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ಇಬ್ಬರು ರಸ್ತೆ ಮಧ್ಯದಲ್ಲಿ ನರಳಾಡುತ್ತಿದ್ದರು.