ಕರ್ನಾಟಕ

karnataka

ETV Bharat / state

ಲಂಚ ಸ್ವೀಕಾರಕ್ಕೆ ಹೈಟೆಕ್​ ತಂತ್ರ... ಫೋನ್ ಪೇ ಮೂಲಕ ಲಂಚ ಪಡೆದಿದ್ದ ಗ್ರಾಮಲೆಕ್ಕಿಗ ಅಂದರ್ - ಲಂಚ ಸ್ವೀಕರಿಸಲು ಹೊಸ ಕಳ್ಳದಾರಿ

ತಿಪಟೂರು ತಾಲೂಕಿನ ಮಡೆನೂರು ವೃತ್ತದ ಕಸಬಾ ಹೋಬಳಿ ಗ್ರಾಮ ಲೆಕ್ಕಿಗ ರವಿಶಂಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಮೀನು ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಲಂಚ ಪಡೆದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

ಸಾಂದರ್ಭಿಕ ಚಿತ್ರ

By

Published : Oct 16, 2019, 10:43 AM IST

Updated : Oct 16, 2019, 1:41 PM IST

ತುಮಕೂರು:ಜಮೀನು ಖಾತೆ ಬದಲಾವಣೆಗೆ ಹೈಟೆಕ್ ಆಗಿ ಫೋನ್ ಪೇ ಮೂಲಕ 5000 ರೂಪಾಯಿ ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತಿಪಟೂರು ತಾಲೂಕಿನ ಮಡೆನೂರು ವೃತ್ತದ ಕಸಬಾ ಹೋಬಳಿ ಗ್ರಾಮ ಲೆಕ್ಕಿಗ ರವಿಶಂಕರ್ ಎಸಿಬಿ ಬಲೆಗೆ ಬಿದ್ದವರು. ತಿಪಟೂರು ತಾಲೂಕಿನ ಅಯ್ಯಪ್ಪನ ಪಾಳ್ಯ ಗ್ರಾಮದ ಉಮೇಶ್ ಎಂಬುವರಿಂದ ಜಮೀನು ಖಾತೆ ಬದಲಾವಣೆಗೆ ಗ್ರಾಮಲೆಕ್ಕಾಧಿಕಾರಿ ರವಿಶಂಕರ್ 30 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು.

ಮೊದಲ ಹಂತದಲ್ಲಿ 5 ಸಾವಿರವನ್ನು ಫೋನ್ ಪೇ ಮೂಲಕ ಈಗಾಗಲೇ ಪಡೆದಿದ್ದ ರವಿಶಂಕರ್ 5 ಸಾವಿರವನ್ನು ಇಂದು ಪುನಹ ಪಡೆದಿದ್ದರು. ಇದರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಬಿ ಡಿವೈಎಸ್ಪಿ ಉಮಾಶಂಕರ್ ನೇತೃತ್ವದ ತಂಡ ರವಿಶಂಕರ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Last Updated : Oct 16, 2019, 1:41 PM IST

ABOUT THE AUTHOR

...view details