ತುಮಕೂರು: ರೈತರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಸಹಾಯಕ ಎಸಿಬಿ ಬಲೆಗೆ ಬಿದ್ದಿರುವ ಘಟನೆ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮ ಲೆಕ್ಕಾಧಿಕಾರಿ ರಶ್ಮಿ ಹಾಗೂ ಗ್ರಾಮ ಸಹಾಯಕರ ಪ್ರಕಾಶ್ ಎಂಬುವವರನ್ನು ಎಸಿಬಿ ವಶಕ್ಕೆ ಪಡೆದಿದೆ.
ಭೀಮಸಂದ್ರದ ರೈತನೋರ್ವ ತಮ್ಮ ಜಮೀನು ಖಾತೆ ಮತ್ತು ಪಹಣಿ ವರ್ಗಾವಣೆ ಮಾಡಿ ಕೊಡುವ ವಿಚಾರವಾಗಿ ಹೆಗ್ಗೆರೆ ಗ್ರಾಮ ಲೆಕ್ಕಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಕೆಲಸ ಮಾಡಿ ಕೊಡಲು ಇಬ್ಬರು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.