ಕರ್ನಾಟಕ

karnataka

ETV Bharat / state

ಮೋಟಾರ್ ವೆಹಿಕಲ್ ಇನ್ಸ್​​ಪೆಕ್ಟರ್​​ ಕೃಷ್ಣಮೂರ್ತಿ ಫಾರಂಹೌಸ್ ಮೇಲೆ ಎಸಿಬಿ ದಾಳಿ - krishnamurty farm house raid news

ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಹಿರಿಯ ಮೋಟಾರ್ ವೆಹಿಕಲ್ ಇನ್ಸ್​​ಪೆಕ್ಟರ್ ಆಗಿರುವ ಕೃಷ್ಣಮೂರ್ತಿ ಅವರಿಗೆ ಸೇರಿರುವ ಫಾರಂ ಹೌಸ್​ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆ ಪತ್ರಗಳ ಪರಿಶೀಲನೆ ಮುಂದುವರಿಸಿದ್ದಾರೆ.

house
ಫಾರಂ ಹೌಸ್ ಮೇಲೆ ಎಸಿಬಿ ದಾಳಿ

By

Published : Jul 15, 2021, 3:47 PM IST

Updated : Jul 15, 2021, 4:23 PM IST

ತುಮಕೂರು:ಆದಾಯ ಮೀರಿ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಇಂದು ಎಸಿಬಿ ಅಧಿಕಾರಿಗಳು ಒಂಭತ್ತು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಅದರಲ್ಲಿ ಬೆಂಗಳೂರಿನ ಕೋರಮಂಗಲದಲ್ಲಿ ಹಿರಿಯ ಮೋಟಾರ್ ವೆಹಿಕಲ್ ಇನ್ಸ್​​ಪೆಕ್ಟರ್ ಆಗಿರುವ ಕೃಷ್ಣಮೂರ್ತಿ ಅವರಿಗೆ ಸಂಬಂಧಿಸಿದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ದೇವರಹಳ್ಳಿ ಬಳಿ ಇರುವ ಫಾರಂಹೌಸ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

ಮೋಟಾರ್ ಇನ್ಸ್‌ಪೆಕ್ಟರ್‌ ಕೃಷ್ಣ ಮೂರ್ತಿ ಅವರಿಗೆ ಸೇರಿದ ಫಾರಂ ಹೌಸ್

ಸುಮಾರು ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ದಾಳಿ ನಡೆಸಲಾಗಿದೆ. ಫಾರಂ ಹೌಸ್‌ನಲ್ಲಿ ಐಷಾರಾಮಿ ಕಟ್ಟಡವೊಂದನ್ನು ಕಟ್ಟಲಾಗುತ್ತಿದ್ದು, ಅಲ್ಲಿ ಕೆಲವು ದಾಖಲೆ ಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇಂದು ಬೆಳಗ್ಗೆ ಕೊರಟಗೆರೆ ತಾಲೂಕು ಚೆನ್ನರಾಯನದುರ್ಗ ಹೋಬಳಿ ದೇವರಹಳ್ಳಿಯ ಅವರ ಎಸ್ಟೇಟ್​ನಲ್ಲಿ ಮತ್ತು ಬೆಂಗಳೂರು ಮನೆ ಮೇಲೆ ಮೇಲೆ ದಾಳಿ ನಡೆಸಲಾಗುತ್ತು.

Last Updated : Jul 15, 2021, 4:23 PM IST

ABOUT THE AUTHOR

...view details