ತುಮಕೂರು:ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಎನ್ ಎಚ್ 48 ರಲ್ಲಿರುವ ಕಳ್ಳಂಬೆಳ್ಳ ಟೋಲ್ ಗೇಟ್ ಬಳಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರ್ಟಿಓ ಅಧಿಕಾರಿ ಸೇರಿದಂತೆ ಮೂವರಿಂದ 52,850 ರೂ.ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಎಸಿಬಿ ದಾಳಿ: ಆರ್ಟಿಓ ಅಧಿಕಾರಿ ಬಳಿ ಇದ್ದ ಹಣ ವಶಕ್ಕೆ - ಎಸಿಬಿ ಡಿವೈಎಸ್ಪಿ ಉಮಾಶಂಕರ್
ರಾಷ್ಟ್ರೀಯ ಹೆದ್ದಾರಿ ಎನ್ ಎಚ್ 48 ರಲ್ಲಿರುವ ಕಳ್ಳಂಬೆಳ್ಳ ಟೋಲ್ ಗೇಟ್ ಬಳಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ 52,850 ರೂ.ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಳ್ಳಂಬೆಳ್ಳ ಟೋಲ್ ಗೇಟ್ ಬಳಿ ಎಸಿಬಿ ಅಧಿಕಾರಿಗಳ ದಾಳಿ
ಕಳ್ಳಂಬೆಳ್ಳ ಟೋಲ್ ಗೇಟ್ ಬಳಿ ಎಸಿಬಿ ಅಧಿಕಾರಿಗಳ ದಾಳಿ
ಚಿತ್ರದುರ್ಗದ ಆರ್ಟಿಓ ಅಧಿಕಾರಿ ಆರ್. ಸುರೇಂದ್ರ ಕುಮಾರ್ ಅವರ ಬಳಿ ಅಧಿಕೃತ ಲೆಕ್ಕದಲ್ಲಿದ್ದ 17,500 ರೂ. ಮತ್ತು ಅನಧಿಕೃತ ಲೆಕ್ಕದಲ್ಲಿದ್ದ 35,350 ರೂ. ಹಣವನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಎಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಹೆಚ್. ಸುನಿಲ್ ಕುಮಾರ್ ದೂರಿನ ಮೇರೆಗೆ ಎಸಿಬಿ ಡಿವೈಎಸ್ಪಿ ಉಮಾಶಂಕರ್ ನೇತೃತ್ವದ ತಂಡ ದಾಳಿ ನಡೆಸಿತ್ತು.