ತುಮಕೂರು: ಕೊರೊನಾ ಭೀತಿ ನಡುವೆಯೂ ಭಕ್ತರ ದರ್ಶನಕ್ಕೆ ಅವಕಾಶ ನೀಡಿದ ನಂತರ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇಗುಲದ ಹುಂಡಿಯಲ್ಲಿ 49,89,780 ರೂ. ಹಣ ಸಂಗ್ರಹವಾಗಿದೆ.
ಕೊರೊನಾ ಭೀತಿ ನಡುವೆಯೂ ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲಕ್ಕೆ ಹರಿದು ಬಂತು ಕಾಣಿಕೆಯ ಮಹಾಪೂರ - ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದ ಹುಂಡಿ
ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದ ಹುಂಡಿಯಲ್ಲಿನ ಕಾಣಿಕೆಯನ್ನು ಎಣಿಕೆ ಮಾಡಿದ್ದು, ಜುಲೈ 8 ರಿಂದ ನವೆಂಬರ್ ಅಂತ್ಯದವರೆಗೆ 49 ಲಕ್ಷಕ್ಕೂ ಹೆಚ್ಚಿನ ಹಣ ಸಂಗ್ರಹವಾಗಿದೆ.
![ಕೊರೊನಾ ಭೀತಿ ನಡುವೆಯೂ ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲಕ್ಕೆ ಹರಿದು ಬಂತು ಕಾಣಿಕೆಯ ಮಹಾಪೂರ Goravanahalli Mahalakshmi Temple](https://etvbharatimages.akamaized.net/etvbharat/prod-images/768-512-9756007-782-9756007-1607019465171.jpg)
ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲಕ್ಕೆ ಹರಿದು ಬಂತು ಕಾಣಿಕೆಯ ಮಹಾಪೂರ
ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲಕ್ಕೆ ಹರಿದು ಬಂತು ಕಾಣಿಕೆಯ ಮಹಾಪೂರ
ವಿಭಾಗಾಧಿಕಾರಿ ಸೂಚನೆ ಮೇರೆಗೆ ದೇವಸ್ಥಾನದ ಸಿಬ್ಬಂದಿ 8 ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಹಣವನ್ನು ಲೆಕ್ಕ ಹಾಕಿದ್ದಾರೆ. 49 ಲಕ್ಷದ 89 ಸಾವಿರದ 780 ರೂ. ಹಣ ನೋಟುಗಳ ರೂಪದಲ್ಲಿ ಸಂಗ್ರಹವಾಗಿದೆ. ನಾಣ್ಯಗಳನ್ನು ಎಣಿಕೆ ಮಾಡಿಲ್ಲ, ಅದೆಲ್ಲವೂ ಅಂದಾಜು 8 ಲಕ್ಷ ರೂ. ಇರಬಹುದು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ಕೊರೊನಾ ಸೋಂಕು ಹರಡುವ ಭೀತಿಯಿಂದ ಬಂದ್ ಮಾಡಲಾಗಿದ್ದ ದೇವಸ್ಥಾನವನ್ನು ಭಕ್ತರಿಗಾಗಿ ಜುಲೈ 8 ರಿಂದ ತೆರೆಯಲಾಗಿತ್ತು. ಅಂದಿನಿಂದ ನವೆಂಬರ್ ಅಂತ್ಯದ ವರೆಗೆ ಸಂಗ್ರಹವಾಗಿದ್ದ ಕಾಣಿಕೆಯನ್ನು ಎಣಿಕೆ ಮಾಡಲಾಗಿದೆ.