ಕರ್ನಾಟಕ

karnataka

ETV Bharat / state

ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಿಗೆ ಹೊಸ ಸ್ಪರ್ಶ ನೀಡುತ್ತಿರುವ ಮಾದರಿ ಶಿಕ್ಷಕ.....! - ಶಿಕ್ಷಕರ ದಿನಾಚರಣೆ 2020,

ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಿಗೆ ಹೊಸ ಸ್ಪರ್ಶ ನೀಡುತ್ತಿದ್ದು, ಇತರ ಶಿಕ್ಷಕರಿಗೆ ಇವರು ಮಾದರಿಯಾಗಿದ್ದಾರೆ. ಇವರ ಕುರಿತು ಸಣ್ಣದೊಂದು ಸ್ಟೋರಿ ಇಲ್ಲಿದೆ ನೋಡಿ...

teacher effort for government school development, teacher effort for government school development in Tumkur, Teachers Day 2020, Teachers Day 2020 news, Teachers Day 2020 latest news, ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಶಿಕ್ಷಕನ ಶ್ರಮ, ತುಮಕೂರಿನಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಶಿಕ್ಷಕನ ಶ್ರಮ, ಶಿಕ್ಷಕರ ದಿನಾಚರಣೆ, ಶಿಕ್ಷಕರ ದಿನಾಚರಣೆ 2020, ಶಿಕ್ಷಕರ ದಿನಾಚರಣೆ 2020 ಸುದ್ದಿ,
ಹೊಸ ಸ್ಪರ್ಶ ನೀಡುತ್ತಿರೋ ಮಾದರಿ ಶಿಕ್ಷಕ

By

Published : Sep 4, 2020, 8:59 PM IST

Updated : Sep 4, 2020, 9:39 PM IST

ತುಮಕೂರು:ಸರ್ಕಾರಿ ಶಾಲೆ ಶಿಕ್ಷಕ ಕೇವಲ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಹರಿಸಿದರೆ ಸಾಲದು ಬದಲಾಗಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ಕೂಡ ನಿರ್ಮಿಸಬೇಕಾಗಿರುವುದು ಪ್ರಸ್ತುತ ಅಗತ್ಯ. ಹಾಗಿದ್ದರೆ ಮಾತ್ರ ಆತ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಶಿಕ್ಷಕನೆಂಬುದಕ್ಕೆ ಪಾತ್ರನಾಗುತ್ತಾನೆ.

ಹೌದು, ಈ ರೀತಿಯ ಗುಣಗಳನ್ನು ಮೈಗೂಡಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ ತುಮಕೂರಿನ ಕೋರ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಡಿ. ಶಿವರಾಜಯ್ಯ. ಇವರು ಮುಖ್ಯ ಶಿಕ್ಷಕರಾಗಿ ಕೆಲಸ ಮಾಡಿದ ಶಾಲೆಗಳಲ್ಲಿ ಸುಸಜ್ಜಿತವಾದ ಶಾಲಾ ಕಟ್ಟಡಗಳನ್ನು ಸರ್ವೇ ಸಾಮಾನ್ಯವಾಗಿ ಕಾಣಬಹುದು. ಸರ್ಕಾರದಿಂದ ಬರುವಂತಹ ಅನುದಾನವನ್ನು ಬಳಸಿಕೊಂಡು ಬಹುತೇಕ ಶಿಥಿಲಗೊಂಡ ಸರ್ಕಾರಿ ಶಾಲಾ ಕಟ್ಟಡಗಳ ಸ್ಥಳದಲ್ಲಿ ಖಾಸಗಿಯವರ ಸಹಭಾಗಿತ್ವದೊಂದಿಗೆ ಗುಣಮಟ್ಟದ ಶಾಲಾ ಕೊಠಡಿಗಳನ್ನು ನಿರ್ಮಿಸುತ್ತ ಬಂದಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಸುಸಜ್ಜಿತವಾದ ಶಾಲಾ ಕಟ್ಟಡಗಳು ತಲೆ ಎತ್ತಿ ನಿಲ್ಲುತ್ತಿವೆ. ಅಲ್ಲದೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಮೂಲ ಸೌಲಭ್ಯವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಹೊಸ ಸ್ಪರ್ಶ ನೀಡುತ್ತಿರೋ ಮಾದರಿ ಶಿಕ್ಷಕ

1985 ರಿಂದ 1995ರವರೆಗೂ ತುಮಕೂರು ತಾಲೂಕಿನ ಸಿಂಗಪುರ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡಿದ ಶಿವರಾಜ ಯ್ಯ, 1995 ರಿಂದ 2006 ರವರೆಗೂ ಬೆಳ್ಳಾವಿ ಗ್ರಾಮದ ಸರ್ಕಾರಿ ಕುವೆಂಪು ಶಾಲೆಯಲ್ಲಿ ಕೆಲಸ ಮಾಡಿದ್ದಾರೆ. ಬೆಳ್ಳಾವಿ ಗ್ರಾಮದಲ್ಲಿ ಸರ್ಕಾರದ ಅನುದಾನವಿಲ್ಲದೆ ಖಾಸಗಿಯವರ ಸಹಭಾಗಿತ್ವದಲ್ಲಿ ಸುಸಜ್ಜಿತವಾದ ಶಾಲಾ ಕಟ್ಟಡವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತುಮಕೂರು ತಾಲೂಕಿನ ಕೋಳಿಹಳ್ಳಿ ಗ್ರಾಮದಲ್ಲಿ ಇರುವ ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕ ನಾಗಿ ಕೆಲಸ ಮಾಡಿದ ಇವರು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಶಾಲೆಗೆ ಬೇಕಾದಂತಹ ಅಗತ್ಯ ಮೂಲಭೂತ ಸೌಕರ್ಯಗಳು ಹಾಗೂ ಪರಿಕರಗಳನ್ನು ಒದಗಿಸಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಿದ್ದರು. ಅಲ್ಲದೇ ಶಿಥಿಲಗೊಂಡಿದ್ದ ಕೋಳಿ ಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡವನ್ನು ತುಮಕೂರಿನ ರೌಂಡ್ ಟೇಬಲ್ ಸಂಸ್ಥೆಯ ಸಹಕಾರದೊಂದಿಗೆ ನೂತನ ಕಟ್ಟಡವನ್ನು ನಿರ್ಮಿಸಿದ್ದಾರೆ. ಹೆಗ್ಗೆರೆ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ ನಾಲ್ಕು ವರ್ಷ ಕೆಲಸಮಾಡಿದ ಅವರು, ಅಲ್ಲಿಯೂ ಕೂಡ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು.

ಈಗ ತುಮಕೂರು ತಾಲೂಕಿನ ಕೋರಾ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿ ವರ್ಗಾವಣೆಗೊಂಡಿದ್ದು, ಶಾಲೆಗೆ ಅಗತ್ಯವಿದ್ದಂತೆ ವಾಟರ್ ಫಿಲ್ಟರ್, ಡೆಸ್ಕ್​ಗಳು, ಸೇರಿದಂತೆ ಶಾಲಾ ಕಟ್ಟಡವನ್ನು ಸುಸ್ಥಿತಿಯಲ್ಲಿ ಇರುವಂತಹ ಕೆಲಸದಲ್ಲಿ ಮುಂದಾಗಿದ್ದಾರೆ. ಅಲ್ಲದೆ ದೂರದ ಬಳ್ಳಾರಿಯಲ್ಲಿ ವಾಸವಿರುವ ದಂಪತಿ ಒಬ್ಬರನ್ನು ಸಂಪರ್ಕಿಸಿ ಕೋರ ಗ್ರಾಮದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಸುಮಾರು 2 ಕೋಟಿ ರೂ. ಮೌಲ್ಯದ ಶಾಲಾ ಕಟ್ಟಡವನ್ನು ನಿರ್ಮಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದಾರೆ.

ಇವರು ಕೆಲಸ ಮಾಡಿದಂತಹ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇತ್ತು. ಶಿವರಾಜಯ್ಯ ಅವರು ಕೆಲಸ ಮಾಡಿದ್ದಂತಹ ಪ್ರತಿ ಶಾಲೆಯಲ್ಲಿ ಅಲ್ಲಿನ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರಿಂದ ಆರ್ಥಿಕ ಸಂಪನ್ಮೂಲವನ್ನು ಕ್ರೂಢೀಕರಿಸಿ ಶಾಲಾ ಕಟ್ಟಡವನ್ನು ಹಾಗೂ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೀಗೆ ಓರ್ವ ಶಿಕ್ಷಕನಾಗಿ ಕೇವಲ ಮಕ್ಕಳಿಗೆ ಪಾಠ ಮಾಡುವುದಲ್ಲದೆ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವ ಹೆಜ್ಜೆ ಇರಿಸಿರುವ ಶಿವರಾಜಯ್ಯ ನಿಜಕ್ಕೂ ಶಿಕ್ಷಕ ದಿನಾಚರಣೆ ವೇಳೆ ಮಾದರಿ ಶಿಕ್ಷಕರು ಎನಿಸಿಕೊಂಡಿದ್ದಾರೆ.

Last Updated : Sep 4, 2020, 9:39 PM IST

ABOUT THE AUTHOR

...view details