ಕರ್ನಾಟಕ

karnataka

ETV Bharat / state

ವಿಶ್ವಶಾಂತಿಗಾಗಿ ತುಮಕೂರಿನಲ್ಲಿ ಮಹಾಯಜ್ಞ.. ಅಗ್ನಿಯಿಲ್ಲದ ವಿಶೇಷ ಜ್ಞಾನಯಜ್ಞ!! - ಮಹಾಯಜ್ಞ ಲೆಟೆಸ್ಟ್ ನ್ಯೂಸ್

ಸುಮಾರು 9 ದಿನಗಳ ಕಾಲ ತುಮಕೂರಿನ ಗಾಜಿನ ಮನೆ ಅವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

A special worship at Tumkur for world peace
ವಿಶ್ವಶಾಂತಿಗಾಗಿ ತುಮಕೂರಿನಲ್ಲಿ ಮಹಾಯಜ್ಞ..ಅಗ್ನಿಯಿಲ್ಲದ ವಿಶೇಷ ಜ್ಞಾನಯಜ್ಞ!

By

Published : Dec 21, 2019, 8:07 PM IST

ತುಮಕೂರು : ವಿಶ್ವಶಾಂತಿಗಾಗಿ ವಿಶೇಷವಾದ ಮಹಾಯಜ್ಞವೊಂದು ತುಮಕೂರಿನಲ್ಲಿ ನಡೆಯುತ್ತಿದೆ.

ವಿಶ್ವಶಾಂತಿಗಾಗಿ ತುಮಕೂರಿನಲ್ಲಿ ಮಹಾಯಜ್ಞ.. ಅಗ್ನಿಯಿಲ್ಲದ ವಿಶೇಷ ಜ್ಞಾನಯಜ್ಞ!

ವಿಶ್ವಶಾಂತಿಗಾಗಿ ವಿವಿಧ ರೀತಿಯ ಯಜ್ಞಯಾಗಾದಿಗಳನ್ನು ನಡೆಸುವುದು ಸಹಜ. ಅಲ್ಲಿ ಹೋಮ ಹವನಾದಿಗಳು ಪ್ರಭುತ್ವ ಸಾಧಿಸುತ್ತವೆ. ಆದರೆ, ತುಮಕೂರಿನಲ್ಲಿ ವಿಶ್ವಶಾಂತಿಗಾಗಿ ಮಹಾಯಜ್ಞವೊಂದು ನಡೆಯುತ್ತಿದೆ. ಅದು 1008 ಕಲ್ಪದ್ರುಮ ಮಹಾಮಂಡಲ ಆರಾಧನೆ ಮತ್ತು ವಿಶ್ವಶಾಂತಿ ಮಹಾಯಜ್ಞವಾಗಿದೆ.

ದಿಗಂಬರ ಜೈನ ಮುನಿಗಳಾದ ಶ್ರೀ ಅಮೋಘ ಕೀರ್ತಿ ಮುನಿ ಮಹಾರಾಜರು ಮತ್ತು ಶ್ರೀ ಅಮರ ಕೀರ್ತಿ ಮುನಿಗಳ ನೇತೃತ್ವದಲ್ಲಿ ಮಹಾಯಜ್ಞವನ್ನು ನಡೆಸಲಾಗುತ್ತಿದೆ. ಸುಮಾರು 9 ದಿನಗಳ ಕಾಲ ತುಮಕೂರಿನ ಗಾಜಿನ ಮನೆ ಅವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ABOUT THE AUTHOR

...view details