(ತೆಗೆದುಕೊಳ್ಳುಬಹುದು)
ತುಮಕೂರು: ಸೂರ್ಯಗ್ರಹಣದ ವೇಳೆ ಜನರಲ್ಲಿ ಹಲವು ರೀತಿಯ ಮೂಢನಂಬಿಕೆಗಳು ಚಾಲ್ತಿಯಲ್ಲಿವೆ. ಇನ್ನೊಂದೆಡೆ ಪುಷ್ಪೋದ್ಯಮದ ಮೇಲೂ ಗ್ರಹಣದ ಪರಿಣಾಮ ಬೀರಿದೆ. ಬಯಲುಸೀಮೆ ತುಮಕೂರು ಜಿಲ್ಲೆಯ ರೈತರ ಕೈ ಹಿಡಿದಿರುವ ಕನಕಾಂಬರ ಹೂವಿನ ಬೆಳೆ ಮೇಲೂ ಗ್ರಹಣ ತನ್ನ ಪರಿಣಾಮ ಬೀರಿದೆ.

ಸೂರ್ಯಗ್ರಹಣದ ದಿನ ಕನಕಾಂಬರ ಹೂವುಗಳನ್ನು ತೋಟಗಳಲ್ಲಿ ರೈತರು ಬಿಡಿಸಲು ಮುಂದಾಗಿಲ್ಲ. ಮಾರುಕಟ್ಟೆಗೆ ಕನಿಷ್ಠ ಪ್ರಮಾಣದ ಹೂವು ಆವಕವಾಗಿದೆ. ಕನಿಷ್ಠ ಆವಕವಾಗಿದ್ದರಿಂದ ಕನಕಾಂಬರ ಹೂ ತಂದಿದ್ದ ಕೆಲವೇ ರೈತರಿಗೆ ಬಂಪರ್ ಬೆಲೆ ಲಭಿಸಿದೆ. ಗುರುವಾರ ಮಾರುಕಟ್ಟೆಯಲ್ಲಿ ಕನಕಾಂಬರ ಹೂಗೆ ಬರೋಬ್ಬರಿ ₹800 ಕೆಜಿಗೆ ಬಿಕರಿಯಾಗಿದೆ. ಉಳಿದ ದಿನಗಳಲ್ಲಿ ₹200ರಿಂದ ₹300 ಬಂದರೆ ಅದೇ ಹೆಚ್ಚು.
ಒಟ್ಟಾರೆ ಸೂರ್ಯ ಗ್ರಹಣದ ಮೂಢನಂಬಿಕೆ ಕನಕಾಂಬರ ಬೆಳೆದ ಹಲವು ರೈತರಿಗೆ ನಷ್ಟ ತಂದರೆ, ಕೆಲವು ರೈತರಿಗೆ ಒಳ್ಳೆಯ ಲಾಭ ಲಭಿಸಿದೆ.