ಕರ್ನಾಟಕ

karnataka

ETV Bharat / state

ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿದೆ ಅಪರೂಪದ ಬಾಂಬೆ ಬ್ಲಡ್ ಗ್ರೂಪ್ - undefined

17 ಸಾವಿರ ಜನರ ಪೈಕಿ ಒಬ್ಬರಲ್ಲಿ ಮಾತ್ರ ಈ ಬಾಂಬೆ ಬ್ಲಡ್ ಗ್ರೂಪ್ ಕಂಡು ಬರುತ್ತದೆ. ಹೀಗಾಗಿ ಇದು ಅಪರೂಪದಲ್ಲಿ ಅಪರೂಪದ ರಕ್ತ ಕಣವೆಂದು ವೈದ್ಯಕೀಯ ಕ್ಷೇತ್ರದಲ್ಲಿ ಗುರುತಿಸಲಾಗಿದೆ.

ತುಮಕೂರು

By

Published : Jun 18, 2019, 4:47 AM IST

Updated : Jun 18, 2019, 9:18 AM IST

ತುಮಕೂರು:ದೇಶದಲ್ಲಿಯೇ ಅಪರೂಪದ ರಕ್ತ ಕಣವಾಗಿರುವ ಬಾಂಬೆ ಬ್ಲಡ್ ಗ್ರೂಪ್ ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿದೆ. ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಂತಿರುವ ಜಿಲ್ಲೆಯ ಪಾವಗಡದಲ್ಲಿ ಈ ಅಪರೂಪದ ರಕ್ತ ಕಣವನ್ನು ಹೊಂದಿರುವ ವ್ಯಕ್ತಿಯೊಬ್ಬರಿದ್ದಾರೆ.

ಜಿಲ್ಲಾ ಸರ್ಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಈ ವ್ಯಕ್ತಿಯ ರಕ್ತವನ್ನು ಸಂಗ್ರಹಿಸಿಡಲಾಗಿದೆ. 6 ತಿಂಗಳ ಹಿಂದೆ ವ್ಯಕ್ತಿಯೊಬ್ಬರು ತುಮಕೂರು ಜಿಲ್ಲಾ ಆಸ್ಪತ್ರೆಗೆ ಬಂದು ರಕ್ತ ತಪಾಸಣೆ ನಡೆಸಿದಾಗ ಅವರಲ್ಲಿ ಬಾಂಬೆ ಗ್ರೂಪ್​ನ ರಕ್ತ ಇರುವುದು ಪತ್ತೆಯಾಗಿತ್ತು.

ಜಿಲ್ಲೆಯಲ್ಲಿ ಪತ್ತೆಯಾಗಿದೆ ಅಪರೂಪದ ಬಾಂಬೆ ಬ್ಲಡ್ ಗ್ರೂಪ್

ಏನಿದು ಬಾಂಬೆ ಬ್ಲಡ್ ಗ್ರೂಪ್?

ಬಾಂಬೆಯಲ್ಲಿ ಈ ಹಿಂದೆ ಈ ರೀತಿಯಾದ ಬ್ಲಡ್ ಗ್ರೂಪ್ ಪತ್ತೆಯಾಗಿದ್ದರಿಂದ ಅದಕ್ಕೆ ಬಾಂಬೆ ಬ್ಲಡ್ ಗ್ರೂಪ್ ಎಂದು ಹೆಸರು ಬಂದಿದೆ ಎಂದು ಹೇಳುತ್ತಾರೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ ವೀಣಾ. ಅಂತಹ ವ್ಯಕ್ತಿಗೆ ರಕ್ತ ಬೇಕಾದ ಸಂದರ್ಭದಲ್ಲಿ ಬಾಂಬೆ ಬ್ಲಡ್ ಗ್ರೂಪ್ ರಕ್ತವನ್ನೇ ಬಳಸಬೇಕಾಗುತ್ತದೆ. ಪಾವಗಡದಲ್ಲಿ ವ್ಯಕ್ತಿಯೊಬ್ಬರಿಂದ ದೊರೆತ ಬಾಂಬೆ ಬ್ಲಡ್ ಗ್ರೂಪ್ ರಕ್ತಕ್ಕೆ ಪಾಂಡಿಚೇರಿಯಿಂದ ಬೇಡಿಕೆ ಬಂದಿತ್ತು. ಆದರೆ, ಕಾರಣಾಂತರಗಳಿಂದ ಅವರು ಬರದೇ, ನಂತರ ಅದನ್ನು ಬೇರೊಬ್ಬ ವ್ಯಕ್ತಿಗೆ ನೀಡಲಾಗಿತ್ತು ಎಂದರು.

17 ಸಾವಿರ ಜನರಲ್ಲಿ ಒಬ್ಬರಿಗೆ ಮಾತ್ರ:

17 ಸಾವಿರ ಜನರ ಪೈಕಿ ಒಬ್ಬರಲ್ಲಿ ಮಾತ್ರ ಈ ಬಾಂಬೆ ಬ್ಲಡ್ ಗ್ರೂಪ್ ಕಂಡುಬರುತ್ತದೆ. ಹೀಗಾಗಿ ಇದು ಅಪರೂಪದಲ್ಲಿ ಅಪರೂಪದ ರಕ್ತ ಕಣವೆಂದು ವೈದ್ಯಕೀಯ ಕ್ಷೇತ್ರದಲ್ಲಿ ಗುರುತಿಸಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಇಂತಹ ಗ್ರೂಪ್ ಹೊಂದಿರುವವರ ಸಂಖ್ಯೆ ಜಾಸ್ತಿ ಇದೆ. ಈ ಭಾಗದಲ್ಲಿ ಗುಳೆ ಹೋಗುವವರ ಸಂಖ್ಯೆ ಹೆಚ್ಚು ಇರುತ್ತದೆ. ಅದೇ ರೀತಿ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವುದರಿಂದ ಹೊರ ರಾಜ್ಯದ ಜನರ ಓಡಾಟ ಇರುತ್ತದೆ. ಹೀಗಾಗಿ ಈ ಭಾಗದಲ್ಲಿ ಬಾಂಬೆ ಬ್ಲಡ್ ಗ್ರೂಪ್ ಕಂಡು ಬಂದಿದೆ ಎನ್ನಲಾಗಿದೆ.

ಇನ್ನು ತುಮಕೂರು ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳಿಂದ ಏಪ್ರಿಲ್ 2018 ರಿಂದ ಮಾರ್ಚ್ 2019ರವರೆಗೆ 15606 ಮಂದಿ ರಕ್ತದಾನ ಮಾಡಿದ್ದಾರೆ. 122 ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ಶೇಕಡಾ 50 ರಷ್ಟು ಬಿ​ ಗ್ರೂಪ್ ರಕ್ತಕಣಗಳು ಪತ್ತೆಯಾಗಿರುವುದು ಇಲ್ಲಿ ಗಮನಾರ್ಹ ಅಂಶವಾಗಿದೆ. ನಂತರದ ಸ್ಥಾನದಲ್ಲಿ ಎ ಗ್ರೂಪ್ ಮತ್ತು ಓ ಗ್ರೂಪ್​ ರಕ್ತಕಣಗಳು ರಕ್ತನಿಧಿ ಕೇಂದ್ರಕ್ಕೆ ಸೇರಿವೆ. ಆದ್ರೆ ಪಾವಗಡ ಹೊರತುಪಡಿಸಿ ಜಿಲ್ಲೆಯ ಯಾವ ಭಾಗದಲ್ಲೂ ಬಾಂಬೆ ಬ್ಲಡ್ ಗ್ರೂಪ್ ಪತ್ತೆಯಿಲ್ಲ.

ಜಿಲ್ಲೆಯೊಂದರಲ್ಲಿ ಜಿಲ್ಲೆಯ ಜನಸಂಖ್ಯೆ ಪ್ರಮಾಣದ ಶೇಕಡಾ ಒಂದರಷ್ಟು ರಕ್ತ ಸಂಗ್ರಹವಾಗಿರಬೇಕು. ತುಮಕೂರು ಜಿಲ್ಲೆಗೆ 28 ಸಾವಿರ ಬ್ಲಡ್ ಯೂನಿಟ್​ಗಳ ಅಗತ್ಯವಿದೆ ಅದ್ರಲ್ಲಿ ಇದೀಗ 15,606 ಯೂನಿಟ್ ಬ್ಲಡ್​ ಇದೆ ಎನ್ನುತ್ತಾರೆ ಜಿಲ್ಲಾ ರಕ್ತ ನಿಧಿ ಕೇಂದ್ರದ ಡಾ ಸನತ್.

Last Updated : Jun 18, 2019, 9:18 AM IST

For All Latest Updates

TAGGED:

ABOUT THE AUTHOR

...view details