ತುಮಕೂರು:ಸ್ಕ್ಯಾನಿಂಗ್ ಸೆಂಟರ್ನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇರಿಸಿ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತುಮಕೂರಿನ ಗಾಂಧಿ ನಗರದಲ್ಲಿ ನಡೆದಿದೆ.
ಸ್ಕ್ಯಾನಿಂಗ್ ಸೆಂಟರ್ನ ಶೌಚಾಲಯದಲ್ಲಿ ಮೊಬೈಲ್ ಇರಿಸಿದ್ದ ವ್ಯಕ್ತಿ.. ಹಿಗ್ಗಾಮುಗ್ಗ ಥಳಿತ - ತುಮಕೂರು ಲೇಟೆಸ್ಟ್ ನ್ಯೂಸ್
ಸ್ಕ್ಯಾನಿಂಗ್ ಸೆಂಟರ್ನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇರಿಸಿ ವಿಡಿಯೋ ಮಾಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಸಖತ್ ಗೂಸಾ ಕೊಟ್ಟಿದ್ದಾರೆ.
ಹಿಗ್ಗಾಮುಗ್ಗ ಥಳಿತ
ಚಾಮರಾಜನಗರ ಮೂಲದ ಯುವಕನಾಗಿರುವ ಹರೀಶ್, ಕಳೆದ ಒಂದು ವರ್ಷದಿಂದ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ. ಮಹಿಳೆಯೊಬ್ಬರು ಶೌಚಾಲಯಕ್ಕೆ ಹೋಗಿದ್ದಾಗ ಅನುಮಾನ ಬಂದು ಅಲ್ಲಿದ್ದ ಮೊಬೈಲ್ ಪರೀಕ್ಷಿಸಿದ್ದಾರೆ. ಅದರಲ್ಲಿ ಮಹಿಳೆಯ ಬೆತ್ತಲೆ ವಿಡಿಯೋ ಪತ್ತೆಯಾಗಿದೆ. ಈ ವೇಳೆ, ಅಲ್ಲಿದ್ದ ಸ್ಥಳೀಯರೆಲ್ಲ ಸೇರಿ ಸಖತ್ ಗೂಸಾ ಕೊಟ್ಟಿದ್ದಾರೆ. ಆರೋಪಿ ಹರೀಶ್ನನ್ನು ವಶಕ್ಕೆ ಪಡೆದಿರುವ ಹೊಸ ಬಡಾವಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ತುಮಕೂರು: ಬಜರಂಗದಳ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
Last Updated : Oct 19, 2021, 10:52 PM IST