ತುಮಕೂರು:ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ತೋಟದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ತಾಲೂಕು ಅರಕೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಮಧುಗಿರಿ ತಾಲೂಕಿನ ಕವಣದಾಲದ ಪುಷ್ಪಲತಾ (30), ಮಕ್ಕಳಾದ ಹೇಮಾ(6), ಯಶವಂತ್(9) ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.
ಪುಷ್ಪಲತಾ ತನ್ನ ಇಬ್ಬರು ಮಕ್ಕಳೊಂದಿಗೆ ಅರಕೆರೆಯಲ್ಲಿರುವ ಅವರ ತಮ್ಮನ ಮನೆಗೆ ಹೋಗಿದ್ದರು. ಈ ವೇಳೆ, ತಮ್ಮ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಮನೆಯವರಿಗೆ ಹೇಳಿ ಹೋಗಿದ್ದ. ಇನ್ನು ಯಾರು ಇರದ ಸಮಯ ನೋಡಿ ಪಷ್ಪಲತಾ ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ತಮ್ಮ ಮನೆಗೆ ಬಂದು ನೋಡಿದಾಗ ಮನೆಯ ಬಾವಿಯಲ್ಲಿ ಪುಷ್ಪಲತಾ ಮತ್ತು ಮಕ್ಕಳ ಶವ ತೇಲುತ್ತಿರುವುದು ಕಂಡು ಬಂದಿದ್ದು, ಕೂಡಲೇ ವಿಷಯವನ್ನ ಕೋರಾ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ದೇಹಗಳನ್ನು ಹೊರಗೆ ತೆಗೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ನಾಯಿ ವಿಚಾರಕ್ಕೆ ಅತ್ತೆ ಮಾವನ ಜೊತೆ ಜಗಳ: ಬೆಂಗಳೂರಲ್ಲಿ ತಾಯಿ ಮಗಳು ಆತ್ಮಹತ್ಯೆ