ತುಮಕೂರು:ಹೆರಿಗೆ ಬಳಿಕ ಪತ್ನಿ ತನಗೆ ತಿಳಿಸದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು ಈ ಬಗ್ಗೆಸಂಬಂಧಿಕರ ಜೊತೆ ಗಲಾಟೆ ಮಾಡಿದ ಪತಿ ಕೊನೆಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಪಟೂರಿನಲ್ಲಿ ನಡೆದಿದೆ. ತಿಪಟೂರಿನ ಅಮ್ಮನಬಾವಿ ಗ್ರಾಮದ ನಾಗರಾಜ್ ಎಸ್.ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ನಾಗರಾಜ್ , ಅರಸೀಕೆರೆ ತಾಲೂಕು ಚಿಂದೇನಹಳ್ಳಿ ಸಮೀಪದ ಸೋಮೆನಹಳ್ಳಿಯ ಬೇಬಿಕಲಾ ಅವರನ್ನು ಕಳೆದ ವರ್ಷ ವಿವಾಹವಾಗಿದ್ದರು. ನಂತರ ದಂಪತಿ ಅಮ್ಮನಬಾವಿಯಲ್ಲಿ ನೆಲೆಸಿದ್ದರು. ಮೂರು ದಿನಗಳ ಹಿಂದೆ ಹೆರಿಗೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಬೇಬಿಕಲಾ ಗಂಡು ಮಗುವಿಗೆ ಜನ್ಮ ನೀಡಿದ್ದರು.