ಕರ್ನಾಟಕ

karnataka

ETV Bharat / state

25 ವರ್ಷದಿಂದ ಹಾವಿನ ದಾಳಿಗೆ ಒಳಗಾದ ಕುಟುಂಬ.. ಹಾವು ಕಚ್ಚಿದ 11 ಮಂದಿಯಲ್ಲಿ ಐವರು ಸಾವು

ಕೊರಟಗೆರೆ ತಾಲೂಕಿನ ತೊಗರಿ ಘಟ್ಟ ಗ್ರಾಮದ ಕುಟುಂಬವೊಂದು ಬರೋಬ್ಬರಿ 25 ವರ್ಷದಿಂದ ಹಾವಿನ ದಾಳಿಗೆ ಒಳಗಾಗಿದೆ. ಈವರೆಗೆ ಕುಟುಂಬದ 11 ಮಂದಿಗೆ ಹಾವು ಕಚ್ಚಿದ್ದು, ಐವರು ಸಾವನ್ನಪ್ಪಿದ್ದಾರೆ.

ಹಾವಿನ ದಾಳಿ
snake

By

Published : Aug 24, 2022, 11:14 AM IST

Updated : Aug 24, 2022, 5:35 PM IST

ತುಮಕೂರು: ಕಳೆದ 25 ವರ್ಷಗಳಲ್ಲಿ ಒಂದೇ ಕುಟುಂಬದ 11 ಮಂದಿಗೆ ಹಾವು ಕಚ್ಚಿದ್ದು, ಇದರಲ್ಲಿ ಐವರು ಮೃತಪಟ್ಟಿರುವ ಘಟನೆ ಕೊರಟಗೆರೆ ತಾಲೂಕಿನ ತೊಗರಿ ಘಟ್ಟ ಗ್ರಾಮದಲ್ಲಿ ನಡೆದಿದೆ. ಹೀಗಾಗಿ, ಉಳಿದ ಕುಟುಂಬಸ್ಥರು ತಮ್ಮ ಹೊಲಗದ್ದೆಗೆ ಹೋಗಲು ಭಯ ಪಡುತ್ತಿದ್ದಾರೆ.

ಇತ್ತೀಚೆಗಷ್ಟೇ ಈ ಕುಟುಂಬದ ಗೋವಿಂದ ರಾಜು ಎಂಬುವರು ಹೊಲದಲ್ಲಿ ನೀರು ಹಾಯಿಸಲು ಹೋದಾಗ ಹಾವು ಕಚ್ಚಿ ಮೃತಪಟ್ಟಿದ್ದರು. ಹೊಲದಲ್ಲಿ ಮೆಣಸಿನ ಗಿಡ ಬೆಳೆದಿದ್ದರೂ ಅದರ ಸಮೀಪ ಸುಳಿಯದಂತಾಗಿದೆ. ಇನ್ನೊಂದೆಡೆ, ಮಾನಸಿಕವಾಗಿ ಇಡೀ ಕುಟುಂಬವೇ ಜರ್ಜರಿತವಾಗಿದೆ.

25 ವರ್ಷದಿಂದ ಹಾವಿನ ದಾಳಿಗೆ ಒಳಗಾದ ಕುಟುಂಬ

ಅಲ್ಲದೇ, ಕೂಲಿ ಕಾರ್ಮಿಕರು ಸಹ ಇವರ ಹೊಲಗದ್ದೆಯಲ್ಲಿ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ನಿರಂತರವಾಗಿ ಹಾವಿನ ದಾಳಿಗೆ ಒಳಗಾಗುತ್ತಿರುವ ಈ ಕುಟುಂಬ, ರಾಹು ಕೇತು ಪೂಜೆಯನ್ನು ಸಹ ಮಾಡುತ್ತದೆ. ಆದರೆ, ಯಾವುದೂ ಕೂಡ ಪ್ರಯೋಜನಕ್ಕೆ ಬಾರದಂತಾಗಿದೆ. ಜ್ಯೋತಿಷಿಗಳ ಮೊರೆ ಹೋದರೂ ಸಮಸ್ಯೆಗೆ ಪರಿಹಾರ ದೊರೆಯದಂತಾಗಿದ್ದು, ಕುಟುಂಬವೇ ದಿಕ್ಕಾಪಾಲಾಗಿ ಹೋಗಿದೆ.

ಇದನ್ನೂ ಓದಿ:ಹಾವು ಕಚ್ಚಿ ಮೃತಪಟ್ಟ ಅಣ್ಣ; ಅಂತ್ಯಕ್ರಿಯೆಗೆ ಬಂದ ತಮ್ಮನಿಗೂ ಹಾವು ಕಡಿದು ಸಾವು

Last Updated : Aug 24, 2022, 5:35 PM IST

ABOUT THE AUTHOR

...view details