ತುಮಕೂರು:ರಾಜ್ಯದಲ್ಲಿ 9,30,000(9.30 ಲಕ್ಷ) ಜನರು ಒಂದು ದಿನ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ತುಮಕೂರಿನಲ್ಲಿ ಅಂತರ್ಜಲ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ನರೇಗಾ ಮೂಲಕ ಕೂಲಿ ಕೆಲಸ ಮಾಡುತ್ತೇವೆ ಎಂದು ನೇರವಾಗಿ ಬಂದರೆ ಜಾಬ್ಕಾರ್ಡ್ ನೀಡಿ ಕೆಲಸ ಕೊಡುತ್ತಿದ್ದೇವೆ. ಸರ್ಕಾರಿ ನೌಕರರಿಗೆ, ಚುನಾಯಿತ ಜನಪ್ರತಿನಿಧಿಗಳಿಗೆ, ಆದಾಯ ತೆರಿಗೆದಾರರಿಗೆ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡುವುದಿಲ್ಲ. ಇನ್ನು ಯಾರೇ ಬಂದರೂ ಕೆಲಸ ಎಂದರೆ ಧಾರಾಳವಾಗಿ ಕೊಡುತ್ತಿದ್ದೇವೆ ಬದುಕುವುದರಿಂದ ಹಸನಾಗಿದೆ ಎಂದರು.