ಕರ್ನಾಟಕ

karnataka

ETV Bharat / state

ತುಮಕೂರಲ್ಲಿ ಎಸ್ಎಸ್ಎಲ್​ಸಿ ಗಣಿತ ಪರೀಕ್ಷೆಗೆ 883 ವಿದ್ಯಾರ್ಥಿಗಳು ಗೈರು - SSLC Mathamitic exam

ಇಂದು ನಡೆದ ಎಸ್ಎಸ್ಎಲ್​ಸಿ ಗಣಿತ ಪರೀಕ್ಷೆಗೆ ತುಮಕೂರಲ್ಲಿ 883 ವಿದ್ಯಾರ್ಥಿಗಳು ಗೈರಾಗಿದ್ದಾರೆ.

Tumkur
Tumkur

By

Published : Jun 27, 2020, 10:51 PM IST

ತುಮಕೂರು:ಇಂದು ನಡೆದ ಎಸ್ಎಸ್ಎಲ್​​ಸಿ ಗಣಿತ ಪರೀಕ್ಷೆಗೆ 34,130 ವಿದ್ಯಾರ್ಥಿಗಳು ಹಾಜರಾಗಿದ್ದು, 883 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

ಜಿಲ್ಲೆಯಲ್ಲಿ ಒಟ್ಟು 35,013 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಾಗಿ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಕಂಟೈನ್​ಮೆಂಟ್ ಪ್ರದೇಶಗಳಿಂದ 48 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,15 ಮಂದಿ ವಿದ್ಯಾರ್ಥಿಗಳು ನೆರೆ ರಾಜ್ಯದಿಂದ ಬಂದು ಪರೀಕ್ಷೆ ಬರೆದಿದ್ದಾರೆ.

ಮಧುಗಿರಿ ಶೈಕ್ಷಣಿಕ ಜಿಲ್ಲೆ (ತುಮಕೂರು ಉತ್ತರ ಮಧುಗಿರಿ) ವ್ಯಾಪ್ತಿಯಲ್ಲಿ 12,433 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 536 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.ತುಮಕೂರು ಜಿಲ್ಲೆಯಿಂದ 21,697 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 347 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

ABOUT THE AUTHOR

...view details