ಕರ್ನಾಟಕ

karnataka

ETV Bharat / state

ಹಾಡಹಗಲೇ ಲಾಂಗು - ಮಚ್ಚು ತೋರಿಸಿ ದರೋಡೆ.. 2 ಗ್ಯಾಂಗ್​​ನ 8 ಆರೋಪಿಗಳ ಬಂಧನ - ಮಚ್ಚು-ಲಾಂಗು ತೋರಿಸಿ ದರೋಡೆ

ತುಮಕೂರು ನಗರದಲ್ಲಿ ಹಾಡಹಗಲೇ ಮಚ್ಚು-ಲಾಂಗು ತೋರಿಸಿ ದರೋಡೆ ನಡೆಸುತ್ತಿದ್ದ ಎರಡು ಗ್ಯಾಂಗ್​ಗಳನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಹಲವು ಪ್ರಕರಣಗಳು ಬೆಳಕಿಗೆ ಬರುವ ಜೊತೆಗೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

8-arrested-from-2-gang-involved-in-several-crime-activities
ಹಾಡಹಗಲೇ ಲಾಂಗು-ಮಚ್ಚು ತೋರಿಸಿ ದರೋಡೆ

By

Published : Sep 11, 2021, 7:09 PM IST

ತುಮಕೂರು:ನಗರದಲ್ಲಿ ಹಾಡಹಗಲೇ ಚಿನ್ನಾಭರಣ ದೋಚುತ್ತಾ ಜನರಲ್ಲಿ ಆತಂಕ ಸೃಷ್ಟಿಸಿದ್ದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ರವಿಕುಮಾರ್, ಶಶಿಕುಮಾರ್, ಶರಣಕುಮಾರ್, ಶ್ರೀನಿವಾಸ್​, ಆ್ಯಂಡ್ರ್ಯೂ, ಶಿವಣ್ಣ, ಮಂಜುನಾಥ ಮತ್ತು ದರ್ಶನ್ ಎಂದು ಗುರುತಿಲಾಗಿದೆ. ಇವರು ಒಬ್ಬಂಟಿಯಾಗಿ ಸಿಗುವವರನ್ನೇ ಟಾರ್ಗೆಟ್ ಮಾಡಿ ದರೋಡೆ ನಡೆಸುತ್ತಿದ್ದರು.

ಹಾಡಹಗಲೇ ಲಾಂಗು - ಮಚ್ಚು ತೋರಿಸಿ ದರೋಡೆ.

ಇತ್ತೀಚೆಗೆ ತುಮಕೂರು ವಿಶ್ವವಿದ್ಯಾನಿಲಯ, ಶಿವಕುಮಾರ್ ಸ್ವಾಮಿಜಿ ಸರ್ಕಲ್, ಕುವೆಂಪು ನಗರದಲ್ಲಿ ಒಬ್ಬಂಟಿ ಪುರುಷರು ಓಡಾಡೋಕೆ ತೀರಾ ಭಯ ಪಡೋ ಪರಿಸ್ಥಿತಿ ನಿರ್ಮಾಣವಾಗಿತ್ತು. ತುಮಕೂರಿನ ಭಾರತಿ ನಗರದಲ್ಲಿ ಕಳೆದ ಮೇ 30ರಂದು ಭರತ್ ಮತ್ತು ಆತನ ಸಹೋದರ ಮಧ್ಯಾಹ್ನ 1.30ರ ಸಮಯದಲ್ಲಿ ಅಣ್ಣತಮ್ಮಂದಿರ ಮೇಲೆ ಎರಗಿ ಲಾಂಗು ಮಚ್ಚು ತೋರಿಸಿ ದರೋಡೆ ನಡೆಸಿದ್ದರು ಎಂದು ತಿಳಿದು ಬಂದಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಗಳ ಬಂಧಿಸಿದ್ದಾರೆ. ಇವರು ಇನ್ನೂ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಜುಲೈ 4ರಂದು ಮಂಜುನಾಥ್ ಎಂಬಾತನನ್ನು ತುಮಕೂರು ನಗರದ ಹೊರವಲಯದಲ್ಲಿರುವ ಟೂಡಾ ಲೇಔಟ್​​ ಬಳಿಯಿಂದ ಅಪಹರಿಸಿದ್ದ ಗ್ಯಾಂಗ್​​​, ನಿರ್ಜನ ಪ್ರದೇಶದ ಬಳಿ ಕರೆದೊಯ್ದು, ಅವರ ಬಳಿಯಿದ್ದ 11,500 ರೂಪಾಯಿ ಫೋನ್ ಪೇ ಮಾಡಿಸಿಕೊಂಡು ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿದ್ದರು. ಕೃತ್ಯದ ಬಗ್ಗೆ ಬಾಯ್ಬಿಟ್ಟರೆ ವಿಡಿಯೋ ಹರಿ ಬಿಡುವುದಾಗಿ ಹೆದರಿಸಿದ್ದರು.

ಇಂತಹ ಪ್ರಕರಣಗಳು ದಾಖಲಾದ ಬೆನ್ನಲ್ಲೆ ಎಚ್ಚೆತ್ತ ಪೊಲೀಸರು, ತನಿಖೆ ಆರಂಭಿಸಿ ತಿಲಕ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಗೌರಿ ಗಣೇಶ ಹಬ್ಬ: ಜಿ.ಪರಮೇಶ್ವರ್​​ಗೆ ಜೋಡಿ ಕುರಿ ನೀಡಿದ ಕಾರ್ಯಕರ್ತರು

ABOUT THE AUTHOR

...view details