ತುಮಕೂರು:ಕೊರೊನಾ ಎರಡನೇ ಅಲೆ ಮುಗಿದು ಮೂರನೇ ಅಲೆಗೆ ಇಡೀ ರಾಜ್ಯ ಸಿದ್ಧವಾಗುತ್ತಿದೆ. ಇನ್ನೊಂದೆಡೆ ಪಾಸಿಟಿವಿಟಿ ರೇಟ್ ಕಡಿಮೆ ಇರುವ ಜಿಲ್ಲೆಗಳಲ್ಲಿ ಸರ್ಕಾರ ಎರಡನೇ ಅಲೆಯ ಭೀತಿಯ ನಡುವೆಯೂ ಶಾಲೆ ಪ್ರಾರಂಭಿಸಿದೆ. ಶಾಲೆಯೇನೋ ಆರಂಭವಾಯ್ತು, ಮಕ್ಕಳನ್ನ ಶಾಲೆಗೆ ಕಳುಹಿಸಬೇಕು ಎಂದು ಸಿದ್ಧತೆ ಮಾಡಿಕೊಂಡಿದ್ದ ಪೋಷಕರಿಗೆ ಸೋಂಕಿನ ಭೀತಿ ದಿಗಿಲು ಹುಟ್ಟಿಸಿದೆ.
ಬರೋಬ್ಬರಿ ಒಂದುವರೆ ವರ್ಷದಿಂದ ಶಾಲೆಯ ಮುಖವನ್ನೇ ಕಾಣದ ಮಕ್ಕಳು ಈಗ ಶಾಲೆಯಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಈ ನಡುವೆ ಪೊಷಕರಿಗೆ ಆಘಾತಕಾರಿ ವಿಷಯ ಎದುರಾಗುತ್ತಿದೆ ರಾಜ್ಯದಲ್ಲಿ 6 ರಿಂದ 8 ತರಗತಿಗೆ ಶಾಲೆ ಆರಂಭಿಸಿದ ಕೇವಲ 10 ದಿನಗಳಲ್ಲಿ ತುಮಕೂರು ಜಿಲ್ಲೆಯೊಂದರಲ್ಲೆ ಬರೋಬ್ಬರಿ 73 ಮಕ್ಕಳಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಇದು ಜಿಲ್ಲಾಡಳಿತಕ್ಕೆ ತಲೆಬಿಸಿ ಉಂಟಾಗಿದೆ, ಇನ್ನು 39 ಜನ ಹೆಣ್ಣುಮಕ್ಕಳಿಗೆ ಹಾಗೂ 34 ಜನ ಗಂಡುಮಕ್ಕಳಲ್ಲಿ ಕೊರೋನಾ ದೃಢವಾಗಿದೆ.
ಇನ್ನು ಶಾಲೆಯಲ್ಲಿ ಒಂದು ಮಗುವಿಗೆ ಕೊರೊನಾ ಪಾಸಿಟಿವ್ ಆದ್ರೆ ಇಡೀ ತರಗತಿಯ ಮಕ್ಕಳಿಗೆ ಕೊರೊನಾ ಪರೀಕ್ಷೆ ಮಾಡಿಸಬೇಕು. ಜೊತೆಗೆ ಪಾಸಿಟಿವ್ ಬಂದಿರುವ ಮಕ್ಕಳಿಗೆ ಕ್ವಾರಂಟೀನ್ ಮಾಡಬೇಕು. ಮಕ್ಕಳಿಂದ ಪೋಷಕರಿಗೆ ಹರಡಿದಿಯೋ ಅಥವಾ ಪೋಷಕರಿಂದಲೆ ಮಕ್ಕಳಿಗೆ ವ್ಯಾಪಿಸಿದೆಯೋ ಎಂಬುದನ್ನು ಟ್ರಾಕ್ ಚೆಕ್ ಮಾಡಬೇಕು.