ತುಮಕೂರು:ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿಂದು 7 ಮಂದಿಯನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್ನಲ್ಲಿ ಇಡಲಾಗಿದೆ. ಈ ಮೂಲಕ ಐಸೋಲೇಷನ್ಗೆ ಒಳಗಾದವರ ಸಂಖ್ಯೆ 130ಕ್ಕೆ ಏರಿಕೆಯಾಗಿದೆ.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಷನ್ಗೆ ಒಳಗಾದವರ ಸಂಖ್ಯೆ 130ಕ್ಕೆ ಏರಿಕೆ - tumkur corona update news
ತುಮಕೂರಿನಲ್ಲಿ ಮತ್ತೆ 7 ಮಂದಿಯನ್ನು ಐಸೋಲೇಷನ್ನಲ್ಲಿಡಲಾಗಿದೆ. ಆ ಮೂಲಕ ಐಸೋಲೇಷನ್ಗೆ ಒಳಗಾದವರ ಸಂಖ್ಯೆ 130ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಷನ್ಗೆ ಒಳಗಾದವರ ಸಂಖ್ಯೆ 130ಕ್ಕೆ ಏರಿಕೆ 7 more doubtful corona patients admitted in tumkur hospital](https://etvbharatimages.akamaized.net/etvbharat/prod-images/768-512-6700481-434-6700481-1586263181280.jpg)
ಕೋವಿಡ್ 19
ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಿಕಾ, ಈವರೆಗೆ 175 ಶಂಕಿತರ ರಕ್ತ ಮತ್ತು ಕಫವನ್ನು ಪರೀಕ್ಷೆಗೆ ಕಳುಹಿಸಿದ್ದು, ಸ್ಯಾಂಪಲ್ಗಳ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 480 ಮಂದಿಯ ಮೇಲೆ ನಿಗಾ ವಹಿಸಲಾಗಿದೆ. 233 ಮಂದಿ ಹೋಂ ಕ್ವಾರಂಟೈನ್ನಲ್ಲಿದ್ದಾರೆ. 137 ಮಂದಿ 28 ದಿನಗಳ ಕಾಲ ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 181 ಮಂದಿಯ ಸ್ಯಾಂಪಲ್ಗಳನ್ನು ಟೆಸ್ಟ್ ಮಾಡಲಾಗಿದೆ.