ತುಮಕೂರು: ಜಿಲ್ಲೆಯಲ್ಲಿ ಇಬ್ಬರು ಗರ್ಭಿಣಿಯರು, ಓರ್ವ ಬಾಣಂತಿ ಸೇರಿದಂತೆ 63 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 1,781ಕ್ಕೆ ಏರಿಕೆಯಾಗಿದೆ.
ತುಮಕೂರು: ಇಬ್ಬರು ಗರ್ಭಿಣಿಯರು, ಓರ್ವ ಬಾಣಂತಿ ಸೇರಿ 63 ಜನರಲ್ಲಿ ಕೊರೊನಾ - ತುಮಕೂರು ಲೆಟೆಸ್ಟ್ ನ್ಯೂಸ್
ಜಿಲ್ಲೆಯಲ್ಲಿಂದು ಇಬ್ಬರು ಗರ್ಭಿಣಿಯರು ಮತ್ತು ಓರ್ವ ಬಾಣಂತಿಗೂ ಕೊರೊನಾ ವಕ್ಕರಿಸಿದೆ.
Tumkur corona case
ತುಮಕೂರು ತಾಲೂಕಿನಲ್ಲಿ 20 ಮಂದಿ, ಪಾವಗಡ ತಾಲೂಕಿನಲ್ಲಿ 10, ಕುಣಿಗಲ್ ತಾಲೂಕಿನಲ್ಲಿ 8, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 7, ತುರುವೇಕೆರೆ ತಾಲೂಕಿನಲ್ಲಿ 6, ಕೊರಟಗೆರೆ ತಾಲೂಕಿನಲ್ಲಿ 5, ಗುಬ್ಬಿ ತಾಲೂಕಿನಲ್ಲಿ 3, ಶಿರಾ ತಾಲೂಕಿನಲ್ಲಿ 2, ಮಧುಗಿರಿ ಮತ್ತು ತಿಪಟೂರು ತಾಲೂಕಿ ತಲಾ ಓರ್ವರಲ್ಲಿ ಸೋಂಕು ತಗುಲಿರುವುದು ವರದಿಯಾಗಿದೆ.
ಇಂದು ಸಂಪೂರ್ಣ ಗುಣಮುಖರಾಗಿ 86 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 917 ಸೋಂಕಿತರು ಕೊರೊನಾ ಗೆದ್ದು ಮನೆ ಸೇರಿದ್ದಾರೆ. ಮಹಾಮಾರಿಗೆ ಜೀವ ಕಳೆದುಕೊಂಡವರ ಸಂಖ್ಯೆ 54ಕ್ಕೆ ತಲುಪಿದೆ.