ಕರ್ನಾಟಕ

karnataka

ETV Bharat / state

45ರ ವರ 25ರ ವಧುವಿನ ವಿವಾಹ: ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡ್ತಿರೋ ಜೋಡಿಯ ಕಥೆ ಸ್ವಾರಸ್ಯಕರ - tumakuru latest news

ಎರಡು ದಿನಗಳಿಂದ ಈ ಜೋಡಿಯ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿವೆ. ಈ ಜೋಡಿಯ ನಡುವೆ ಭಾರಿ ವಯಸ್ಸಿನ ಅಂತರ ಇದ್ದರೂ ಇದರ ಹಿಂದೆ ಸ್ವಾರಸ್ಯಕರ ವೃತ್ತಾಂತವೊಂದಿದೆ. ತುಮಕೂರು ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

45-year-old-man-married-with-25-year-old-girl-in-tumkur
ಸಾಕಷ್ಟು ಚರ್ಚೆಗೆ ಗ್ರಾಸವಾದ 45 ವರ್ಷದ ವರ 25 ವರ್ಷದ ವಧುವಿನ ವಿಹಾಹ

By

Published : Oct 19, 2021, 1:50 PM IST

Updated : Oct 19, 2021, 2:08 PM IST

ತುಮಕೂರು: ರಾಜ್ಯದಲ್ಲಿ ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಭಾರಿ ಸದ್ದು ಮಾಡುತ್ತಿದೆ. ಈ ಫೋಟೋ ಇಟ್ಟುಕೊಂಡು ನೆಟ್ಟಿಗರು ತರಹೇವಾರಿ ಶೀರ್ಷಿಕೆ ನೀಡಿ ಲೈಕ್​ ಕಮೆಂಟ್ಸ್​ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈ ಜೋಡಿ ಯಾವುದು. ಏನು ಎತ್ತ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಹೌದು, ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದಲ್ಲಿ 45 ವರ್ಷದ ವ್ಯಕ್ತಿ ಜೊತೆ 25 ವರ್ಷದ ಯುವತಿ ವಿವಾಹವಾಗಿದ್ದಾರೆ. ಈ ವಿಷಯ ಹಾಗೂ ಫೋಟೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಶಂಕರ(45) ಮೇಘನಾ (25) ವಿವಾಹವಾದ ನವ ಜೋಡಿ.

ಸಾಕಷ್ಟು ಚರ್ಚೆಗೆ ಗ್ರಾಸವಾದ 45 ವರ್ಷದ ವರ 25 ವರ್ಷದ ವಧುವಿನ ವಿಹಾಹ

ವಿಶೇಷತೆ ಏನು?

ಹೆಣ್ಣು ಸಿಗದೇ ಇದ್ದ ಶಂಕರಗೆ ಈವರೆಗೂ ಮದುವೆ ಆಗಿರಲಿಲ್ಲ. ಮೇಘನಾಳಿಗೆ ಈ ಮೊದಲೇ ಮದುವೆ ಆಗಿದ್ದು, ವಿಚ್ಛೇದನ ಆಗಿತ್ತು. ಶಂಕರ ಕನ್ಯೆ ಹುಡುಕಿ ಹುಡುಕಿ ಸುಸ್ತಾಗಿ ಮದುವೆಯೇ ಬೇಡ ಎಂದು ನಿರ್ಧರಿಸಿ ತಮ್ಮ ಪಾಡಿಗೆ ಜೀವನ ಮಾಡಿಕೊಂಡಿದ್ದರು.

ಈ ವೇಳೆ ಸ್ವತಃ ಮೇಘನಾ ಅವರು ಶಂಕರ ಅವರನ್ನು ಮದುವೆ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಇದಕ್ಕೆ ಒಪ್ಪಿಕೊಂಡ ಶಂಕರ ಅವರು ದೇವಸ್ಥಾನದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಮದುವೆಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿವೆ.

Last Updated : Oct 19, 2021, 2:08 PM IST

ABOUT THE AUTHOR

...view details