ಕರ್ನಾಟಕ

karnataka

ETV Bharat / state

ತುಮಕೂರು ಜಿಲ್ಲೆಯಲ್ಲಿ 45 ಮಂದಿ ಕೋವಿಡ್​ನಿಂದ ಗುಣಮುಖ - ತುಮಕೂರು ಕೊರೊನಾ ಸೋಂಕಿತ ಪ್ರಕರಣ

ತುಮಕೂರು ಜಿಲ್ಲೆಯಲ್ಲಿ ಮತ್ತೆ 45 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಮನೆಗೆ ತೆರಳುತ್ತಿದ್ದ ಅವರೆಲ್ಲರೂ ತಮಗೆ ಚಿಕಿತ್ಸೆ ನೀಡಿದ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.

45-people-cured-from-covid-in-tumakuru
ತುಮಕೂರು ಜಿಲ್ಲೆಯಲ್ಲಿ 45 ಮಂದಿ ಕೋವಿಡ್​ನಿಂದ ಗುಣಮುಖ

By

Published : Jul 18, 2020, 3:39 AM IST

ತುಮಕೂರು:ಜಿಲ್ಲೆಯಲ್ಲಿ ಶುಕ್ರವಾರ 45 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಶಿರಾ ತಾಲೂಕಿನ 18 ಮಂದಿ, ತುಮಕೂರು ತಾಲೂಕಿನ 10, ಕುಣಿಗಲ್ ತಾಲೂಕಿನ 7 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸೋಂಕಿತರಲ್ಲಿ ವೃದ್ಧರು, ಬಾಲಕಿ ಹಾಗೂ ಮಹಿಳೆಯರು ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯಿಂದ ತೆರಳುವ ವೇಳೆ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.

ಜಿಲ್ಲೆಯಲ್ಲಿ ಇದುವರೆಗೂ ಆಸ್ಪತ್ರೆಗೆ ದಾಖಲಾಗಿದ್ದ 630 ಮಂದಿಯಲ್ಲಿ 267 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಅದರಲ್ಲಿ ತುಮಕೂರು ತಾಲೂಕಿನ 66 ಮಂದಿ, ಶಿರಾ ತಾಲೂಕಿನ 39, ಪಾವಗಡ ತಾಲೂಕಿನ 39, ಮಧುಗಿರಿ ತಾಲೂಕಿನ 31, ಚಿಕ್ಕನಾಯಕನಹಳ್ಳಿಯ 22, ಕೊರಟಗೆರೆಯ 24 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನು ಜಿಲ್ಲಾಸ್ಪತ್ರೆಯಲ್ಲಿ 345 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details