ಕರ್ನಾಟಕ

karnataka

ETV Bharat / state

ಜಮೀನು ಪತ್ರವನ್ನು ರಿಜಿಸ್ಟರ್ ಮಾಡಲು ಲಂಚಕ್ಕಾಗಿ ಬೇಡಿಕೆ : ಸಬ್​ರಿಜಿಸ್ಟರ್​ಗೆ 4 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್​

ಸಬ್​ ರಿಜಿಸ್ಟರ್​ ರಾಮಚಂದ್ರಯ್ಯ ಎಂಬುವರಿಗೆ ತುಮಕೂರಿನ 7ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷ ಕಠಿಣ ಸಜೆ ಹಾಗೂ 8 ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

4 year jail sentence to sub register for demand to bribe
ಸಬ್​ರಿಜಿಸ್ಟರ್​ಗೆ 4 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್​

By

Published : Jan 8, 2022, 1:43 AM IST

ತುಮಕೂರು:ಜಮೀನಿನ ದಾನ ಪತ್ರವನ್ನು ರಿಜಿಸ್ಟರ್ ಮಾಡಲು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಮಧುಗಿರಿ ಸಬ್ ರಿಜಿಸ್ಟರ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿಆರೋಪಿಗೆ ಕೋರ್ಟ್​ 4 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

ಸಬ್​ ರಿಜಿಸ್ಟರ್​ ರಾಮಚಂದ್ರಯ್ಯ ಎಂಬುವರಿಗೆ ತುಮಕೂರಿನ 7ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷ ಕಠಿಣ ಸಜೆ ಹಾಗೂ 8ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ಮಧುಗಿರಿ ತಾಲೂಕು ಚಿಕ್ಕ ಹೊಸಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ಜಮೀನಿನ ದಾನ ಪತ್ರವನ್ನು ರಿಜಿಸ್ಟರ್ ಮಾಡಲು ಸಬ್ ರಿಜಿಸ್ಟರ್ 4000 ಲಂಚಕ್ಕಾಗಿ ಬೇಡಿಕೆ ಇರಿಸಿದ್ದರು. ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ರಘುಕುಮಾರ್ ಪ್ರಕರಣ ದಾಖಲಿಸಿಕೊಂಡು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್ ಸುಧೀಂದ್ರ ನಾಥ್ ಆರೋಪಿ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಇದನ್ನು ಓದಿ: ತುಮಕೂರು ಮಹಿಳೆ ಅತ್ಯಾಚಾರ, ಕೊಲೆ.. 26 ವರ್ಷಗಳ ಬಳಿಕ ಅಪರಾಧಿಗೆ ಜೀವಾವಧಿ ಶಿಕ್ಷೆ..

ABOUT THE AUTHOR

...view details