ತುಮಕೂರು:ಜಿಲ್ಲೆಯಲ್ಲಿ ಇಂದು 340 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ತುಮಕೂರು ಜಿಲ್ಲೆಯಲ್ಲಿ ಇಂದು 340 ಮಂದಿಗೆ ಸೋಂಕು - Tumkur corona news
ಕಲ್ಪತರು ನಾಡಿನಲ್ಲಿ ಇಂದು 340 ಜನರಲ್ಲಿ ಕೊರೊನಾ ಸೋಂಕು ತಗುಲಿದೆ. ಇಂದು ಐವರು ಸೋಂಕಿನಿಂದ ಮೃತಪಟ್ಟಿದ್ದಾರೆ.
ಜಿಲ್ಲಾಸ್ಪತ್ರೆ
ತುಮಕೂರು ತಾಲೂಕಿನಲ್ಲಿ 130, ಕೊರಟಗೆರೆ ತಾಲೂಕಿನಲ್ಲಿ 45, ಪಾವಗಡ ತಾಲೂಕಿನಲ್ಲಿ 29, ತಿಪಟೂರು ತಾಲೂಕಿನಲ್ಲಿ 23, ಶಿರಾ ತಾಲೂಕಿನಲ್ಲಿ 22, ಚಿಕ್ಕನಾಯಕನಹಳ್ಳಿ ಮತ್ತು ಗುಬ್ಬಿ ತಾಲೂಕಿನಲ್ಲಿ ತಲಾ 21 ಮಂದಿಗೆ, ಕುಣಿಗಲ್ ತಾಲೂಕಿನಲ್ಲಿ 19 ಮತ್ತು ತುರುವೇಕೆರೆ ತಾಲೂಕಿನಲ್ಲಿ 15 ಮಂದಿಗೆ ಸೋಂಕು ತಗುಲಿದೆ.
ಇಂದು ಐವರು ಸೋಂಕಿನಿಂದ ಮೃತಪಟ್ಟಿದ್ದಾರೆ. 48 ರಿಂದ 60 ವರ್ಷ ಮೇಲ್ಪಟ್ಟವರು ಸೋಂಕಿಗೆ ಒಳಗಾಗಿರುವುದು ಗಮನಾರ್ಹವಾಗಿದೆ. ಅದೇ ರೀತಿ ಐದು ವರ್ಷ ಒಳಗಿನ ಮೂವರು ಮಕ್ಕಳು ಕೂಡ ಸೋಂಕಿಗೆ ಒಳಗಾಗಿದ್ದಾರೆ.