ತುಮಕೂರು:ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ತುಮುಲ್)ದಿಂದ ನಿತ್ಯ 30 ಸಾವಿರ ಲೀಟರ್ ಹಾಲನ್ನು ಪ್ಯಾಕ್ ಮಾಡಿಸಿಕೊಂಡು ಜಮ್ಮು-ಕಾಶ್ಮೀರಕ್ಕೆ ಖಾಸಗಿಯವರು ತೆಗೆದುಕೊಂಡು ಹೋಗುತ್ತಾರೆ ಎಂದು ತುಮಕೂರು ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ತಿಳಿಸಿದ್ದಾರೆ.
ತುಮಕೂರಿನ ಹಾಲು ದೇಶದ ಗಡಿಗೆ ರವಾನೆ.. ಜಮ್ಮ ಕಾಶ್ಮೀರದಲ್ಲಿ ನಿತ್ಯ 30 ಸಾವಿರ ಲೀಟರ್ ಕ್ಷೀರ ಮಾರಾಟ! - ತುಮಕೂರು ಇತ್ತೀಚಿನ ಸುದ್ದಿ
ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಪ್ರತಿದಿನ 30 ಸಾವಿರ ಲೀಟರ್ ಹಾಲನ್ನು ಜಮ್ಮು-ಕಾಶ್ಮೀರಕ್ಕೆ ಸಾಗಿಸಲಾಗುತ್ತದೆ ಎಂದು ತುಮಕೂರು ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ಹೇಳಿದ್ದಾರೆ.
![ತುಮಕೂರಿನ ಹಾಲು ದೇಶದ ಗಡಿಗೆ ರವಾನೆ.. ಜಮ್ಮ ಕಾಶ್ಮೀರದಲ್ಲಿ ನಿತ್ಯ 30 ಸಾವಿರ ಲೀಟರ್ ಕ್ಷೀರ ಮಾರಾಟ! Tumkur](https://etvbharatimages.akamaized.net/etvbharat/prod-images/768-512-10443137-thumbnail-3x2-mng.jpg)
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿನಿತ್ಯ 40 ಸಾವಿರ ಲೀಟರ್ ಹಾಲನ್ನು ಆಂಧ್ರಪ್ರದೇಶಕ್ಕೆ ಕ್ಷೀರಭಾಗ್ಯ ಯೋಜನೆಯಡಿ ವಿತರಣೆ ಮಾಡಲು ಕಳುಹಿಸಿಕೊಡಲಾಗುತ್ತದೆ. ಒಕ್ಕೂಟದಲ್ಲಿ ಹಾಲು ಶೇಖರಣೆ ದಿನೇ ದಿನೇ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿದೆ. 2020ರ ಡಿಸೆಂಬರ್ ಅಂತ್ಯಕ್ಕೆ 7,79,534 ಲೀ. ಶೇಖರಣೆಯಾಗಿದೆ. ಆಗಸ್ಟ್ 28, 2020ರಂದು 8,77,087 ಲೀ. ಹಾಲು ಶೇಖರಿಸಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಜಿಲ್ಲೆಯಲ್ಲಿ ಒಟ್ಟು 1238 ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 71,804 ಮಂದಿ ಹಾಲು ಸರಬರಾಜು ಮಾಡುತ್ತಿದ್ದಾರೆ ಎಂದು ಹೇಳಿದರು.
ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡು ಆಡಳಿತ ಮಂಡಳಿಯು ಜನವರಿ 30ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಹಾಲಿನ ದರವನ್ನು ಫೆಬ್ರವರಿ 1, 2021ರಿಂದ ಜಾರಿಗೆ ಬರುವಂತೆ ಉತ್ಪಾದಕರಿಗೆ ನೇರವಾಗಿ ಎರಡು ರೂ.ಗಳನ್ನು ಹೆಚ್ಚಿಸಲಾಗಿದೆ. ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಹೆಚ್ಚುವರಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.