ತುಮಕೂರು :ಜಿಲ್ಲೆಯಲ್ಲಿ ಇಂದು 284 ಮಂದಿಗೆ ಕೊರೊನಾ ಸೋಂಕು ತಗಲಿದೆ. ಅದರ ಸಂಖ್ಯೆ 10,721ಕ್ಕೇರಿದೆ. 60 ವರ್ಷ ಮೇಲ್ಪಟ್ಟ 59 ಮಂದಿಗೆ ಮತ್ತು 5 ವರ್ಷದೊಳಗಿನ ಮೂರು ಮಕ್ಕಳಿಗೂ ವೈರಸ್ ಅಂಟಿದೆ.
ಕಲ್ಪತರು ನಾಡಿನಲ್ಲಿ 284 ಮಂದಿಗೆ ಕೊರೊನಾ ಸೋಂಕು - ಕೊರೊನಾ ವೈರಸ್
ಇಂದು ಇಬ್ಬರು ಮೃತಪಟ್ಟಿದ್ದು, ಈವರೆಗೂ 245 ಮಂದಿ ಮೃತಪಟ್ಟಂತಾಗಿದೆ. 229 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೂ ದಾಖಲಾದ ಒಟ್ಟು ಪ್ರಕರಣಗಳ ಪೈಕಿ 8,292 ಮಂದಿ ಗುಣಮುಖರಾಗಿದ್ದಾರೆ..
ಕೋವಿಡ್-19 ಆಸ್ಪತ್ರೆ
ತುಮಕೂರು ತಾಲೂಕಿನಲ್ಲಿ 86 ಮಂದಿಗೆ, ಪಾವಗಡದಲ್ಲಿ 44, ಶಿರಾ 36, ತಿಪಟೂರು 34, ತುರುವೇಕೆರೆ 20, ಚಿಕ್ಕನಾಯಕನಹಳ್ಳಿ 19, ಗುಬ್ಬಿ 14, ಮಧುಗಿರಿ 13, ಕುಣಿಗಲ್ 12, ಕೊರಟಗೆರೆ ತಾಲೂಕಿನಲ್ಲಿ ಆರು ಮಂದಿಗೆ ಸೋಂಕು ತಗುಲಿದೆ.
ಇಂದು ಇಬ್ಬರು ಮೃತಪಟ್ಟಿದ್ದು, ಈವರೆಗೂ 245 ಮಂದಿ ಮೃತಪಟ್ಟಂತಾಗಿದೆ. 229 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೂ ದಾಖಲಾದ ಒಟ್ಟು ಪ್ರಕರಣಗಳ ಪೈಕಿ 8,292 ಮಂದಿ ಗುಣಮುಖರಾಗಿದ್ದಾರೆ. 2,184 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.