ತುಮಕೂರು:ಜಿಲ್ಲೆಯಲ್ಲಿ ಇಂದು 214 ಮಂದಿಗೆ ಕೊರೊನಾ ಸೋಂಕು ತಗಲಿದ್ದು ಸೋಂಕಿತರ ಸಂಖ್ಯೆ ಇದುವರೆಗೂ 17,387ಕ್ಕೇರಿಕೆಯಾಗಿದೆ.
ತಾಲೂಕುವಾರು ಕೊರೊನಾ ವಿವರ :
ತುಮಕೂರು ತಾಲೂಕಿನಲ್ಲಿ 97 ಮಂದಿಗೆ, ಶಿರಾ ತಾಲೂಕಿನಲ್ಲಿ 27, ಗುಬ್ಬಿ ತಾಲೂಕಿನಲ್ಲಿ 19, ಮಧುಗಿರಿ ತಾಲೂಕಿನಲ್ಲಿ 18, ತಿಪಟೂರು ತಾಲ್ಲೂಕಿನಲ್ಲಿ 17, ಕುಣಿಗಲ್ ಮತ್ತು ಕೊರಟಗೆರೆ ತಾಲೂಕಿನಲ್ಲಿ ತಲಾ 8 ಮಂದಿಗೆ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 6 ಹಾಗು ತುರುವೇಕೆರೆ ತಾಲೂಕಿನಲ್ಲಿ ಮೂವರಿಗೆ ಸೋಂಕು ತಗುಲಿದೆ.