ತುಮಕೂರು: ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ನೇತೃತ್ವದಲ್ಲಿ ಗೋಡನ್ವೊಂದರ ಮೇಲೆ ದಾಳಿ ನಡೆಸಿ 266 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿರುವ ಘಟನೆ ತುಮಕೂರು ತಾಲೂಕು ಗೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ದಾಳಿ ಮಾಡಿದ ಸಂದರ್ಭದಲ್ಲಿ ಗೋಡೌನ್ನಲ್ಲಿ ತಾಜ್ಮಹಲ್ ಬ್ರಾಂಡ್ ಸೂಪರ್ ಫೈಡ್ ರೈಸ್ ಹೆಸರಿನ ಅಕ್ಕಿ ತುಂಬಿದ ಚೀಲಗಳನ್ನು ಪತ್ತೆಹಚ್ಚಲಾಗಿದೆ. ಲ್ಯಾಪ್ಟಾಪ್, ಪ್ರಿಂಟರ್, ಬಿಲ್ ಪುಸ್ತಕಗಳು ಹಾಗೂ ತೂಕ ಮಾಡುವ ಯಂತ್ರ ಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಗೋಡೌನ್ನಲ್ಲಿ ಕೆಲಸ ಮಾಡುತ್ತಿದ್ದ 9 ಮಂದಿ ಕಾರ್ಮಿಕರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.