ಕರ್ನಾಟಕ

karnataka

ತುಮಕೂರು ಜಿಲ್ಲೆಯಲ್ಲಿ 250 ಜನರಿಗೆ ಕೊರೊನಾ ದೃಢ :  222 ಮಂದಿ ಗುಣಮುಖ

By

Published : Sep 9, 2020, 8:10 PM IST

ತುಮಕೂರು ಜಿಲ್ಲೆಯಲ್ಲಿ ಇಂದು ಕಂಡು ಬಂಧಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಲ್ಲಿದೆ.

Tumkur
Tumkur

ತುಮಕೂರು: ಜಿಲ್ಲೆಯಲ್ಲಿ ಇಂದು 250 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8049ಕ್ಕೇರಿಕೆಯಾಗಿದೆ.

ಇಂದು ತುಮಕೂರು ತಾಲೂಕಿನಲ್ಲಿ 85 ಮಂದಿಗೆ, ಪಾವಡ ತಾಲೂಕಿನಲ್ಲಿ 54 ಮಂದಿಗೆ , ತಿಪಟೂರು ತಾಲೂಕಿನಲ್ಲಿ 21 ಮಂದಿ, ಮಧುಗಿರಿ ತಾಲೂಕಿನಲ್ಲಿ 19 , ಕುಣಿಗಲ್ ಮತ್ತು ಶಿರಾ ತಾಲೂಕಿನಲ್ಲಿ ತಲಾ 11, ಚಿಕ್ಕನಾಯಕನಹಳ್ಳಿ ಮತ್ತು ಗುಬ್ಬಿ ತಾಲೂಕಿನಲ್ಲಿ ತಲಾ 14 ಮಂದಿಗೆ , ತುರುವೇಕೆರೆ ತಾಲೂಕಿನಲ್ಲಿ 15 ಮಂದಿಗೆ ಹಾಗೂ ಕೊರಟಗೆರೆ ತಾಲೂಕಿನಲ್ಲಿ ಆರು ಮಂದಿಗೆ ಸೋಂಕು ತಗುಲಿದೆ.

ಜಿಲ್ಲೆಯಲ್ಲಿಂದು 222 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 6014 ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನೂ 1832 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಇಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಸಾವನ್ನಪ್ಪಿದರ ಸಂಖ್ಯೆ 190ಕ್ಕೇರಿಕೆಯಾಗಿದೆ.

ABOUT THE AUTHOR

...view details