ತುಮಕೂರು: ಮಹಾನಗರ ಪಾಲಿಕೆಯ 22ನೇ ವಾರ್ಡಿನ ಉಪಚುನಾವಣೆ ಗೆ ಜೆಡಿಎಸ್ ಪಕ್ಷದ ಟಿಕೆಟ್ ಗಾಗಿ ಭಾರಿ ಪೈಪೋಟಿ ನಡೆದಿದೆ.
ತುಮಕೂರು ಪಾಲಿಕೆ 22ನೇ ವಾರ್ಡ್ ಉಪಚುನಾವಣೆ - kannadanews
ಟಿಕೆಟ್ ಗಾಗಿ ಸಚಿವ ಶ್ರೀನಿವಾಸ್ ಅವರೆದುರು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್ ಕೈ ಮುಗಿದು ಮನವಿ ಮಾಡಿದ್ದಾರೆ.
![ತುಮಕೂರು ಪಾಲಿಕೆ 22ನೇ ವಾರ್ಡ್ ಉಪಚುನಾವಣೆ](https://etvbharatimages.akamaized.net/etvbharat/prod-images/768-512-3278257-thumbnail-3x2-surya.jpg)
ಟಿಕೆಟ್ ಗಾಗಿ ಸಚಿವ ಶ್ರೀನಿವಾಸ್ ಮುಂದೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್ ಇಂದು ತಮ್ಮ ಬೆಂಬಲಿಗರೊಂದಿಗೆ ತುಮಕೂರಿನ ಸಚಿವ ಶ್ರೀನಿವಾಸ್ ಅವರ ಮನೆಗೆ ಬಂದು ಟಿಕೆಟ್ ತಮಗೆ ನೀಡಬೇಕೆಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ನನ್ನ ಮೇಲೆ ಕೆಟ್ಟ ಆಪಾದನೆ ಇದ್ರೆ ಟಿಕೆಟ್ ಕೊಡಬೇಡಿ ಎಂದು ಹೇಳಿ ನೂರಾರು ಜನರ ಸಮ್ಮುಖದಲ್ಲಿ ಕೈ ಮುಗಿದು ಟಿಕೇಟ್ ಗಾಗಿ ಮನವಿ ಮಾಡಿದರು.
ಬೆಳ್ಳಿ ಲೋಕೇಶ್ ಗೆ ಟಿಕೆಟ್ ನೀಡುವಂತೆ ಮಾಜಿ ಮೇಯರ್ ರವಿ ಪೋಷಕರು ಸಾಥ್ ನೀಡಿದ್ದು ವಿಶೇಷವಾಗಿತ್ತು. ಬೆಳ್ಳಿ ಲೋಕೇಶ್ ಗೆ ಟಿಕೆಟ್ ತಪ್ಪಿದರೆ ನಮ್ಮ ಕುಟುಂಬಕ್ಕೆ ಟಿಕೆಟ್ ನೀಡುವಂತೆ ಈ ಹಿಂದೆ ಮೇಯರ್ ಆಗಿದ್ದ ರವಿ ಕುಟುಂಬದವರು ಸಚಿವ ಶ್ರೀನಿವಾಸ್ ಅವರಲ್ಲಿ ಮನವಿ ಮಾಡಿದರು.