ತುಮಕೂರು: ಗೃಹ ಪ್ರವೇಶದಲ್ಲಿ ವಿಷಾಹಾರ ಸೇವಿಸಿ ಸುಮಾರು 20 ಜನರು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ನಡೆದಿದೆ.
ವಿಷಾಹಾರ ಸೇವಿಸಿ 20 ಜನ ಅಸ್ವಸ್ಥ… ಪ್ರಾಥಮಿಕ ಚಿಕಿತ್ಸೆ ನೀಡಿದ ಕುಣಿಗಲ್ ಶಾಸಕ - ಪ್ರಾಥಮಿಕ ಚಿಕಿತ್ಸೆ ನೀಡಿದ ಕುಣಿಗಲ್ ಶಾಸಕ ಡಾ. ರಂಗನಾಥ್
ಗೃಹ ಪ್ರವೇಶವೊಂದರಲ್ಲಿ ವಿಷಾಹಾರ ಸೇವಿಸಿ ಸುಮಾರು 20 ಜನರು ಅಸ್ವಸ್ಥರಾಗಿದ್ದಾರೆ. ಸ್ವತಃ ವೈದ್ಯರಾಗಿರೋ ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಅಸ್ವಸ್ಥರಿಗೆ ಚಿಕಿತ್ಸೆ ನೀಡಿದ್ದಾರೆ.
ವಿಷಹಾರ ಸೇವಿಸಿ 20 ಜನ ಅಸ್ವಸ್ಥ…
ಸ್ವತಃ ವೈದ್ಯರಾಗಿರೋ ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಅಸ್ವಸ್ಥರಾದವರಿಗೆ ಚಿಕಿತ್ಸೆ ನೀಡಿದ್ದಾರೆ. ಗ್ರಾಮದ ಸಮುದಾಯ ಭವನವೊಂದರಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದಾರೆ.
ಗ್ರಾಮದ ಚಿಕ್ಕಹನುಮಯ್ಯ ಮನೆಯ ಗೃಹಪ್ರವೇಶದಲ್ಲಿ ಸಂಬಂಧಿಕರು ಊಟ ಮಾಡಿದ್ದರು. ನಂತರ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಅಗತ್ಯವಿರುವರನ್ನು ಅಮೃತೂರು ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಸದ ಡಿ ಕೆ ಸುರೇಶ್ ಹಾಗೂ ಶಾಸಕ ಡಾ. ರಂಗನಾಥ್ ಭೇಟಿ ನೀಡಿ ಪರಿಶೀಲಿಸಿದರು.