ತುಮಕೂರು: ಗಾಂಜಾ ಮಾರಾಟ ಮಾಡಲು ತಿರುಪತಿಯಿಂದ ಬಂದಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು 6 ಕೆ.ಜಿ ಗಾಂಜಾ ಸೊಪ್ಪನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಿರಣ್ ಮತ್ತು ಪವನ್ ಬಂಧಿತ ಆರೋಪಿಗಳು. ಆರೋಪಿಗಳಿಬ್ಬರಿಗೆ ಸುರೇಶ ಎಂಬಾತ ವಿಶಾಖಪಟ್ಟಣಂನಿಂದ ತಿರುಪತಿಗೆ ಗಾಂಜಾ ಸೊಪ್ಪು ಸರಬರಾಜು ಮಾಡಿದ್ದನು. ತುಮಕೂರಿನಲ್ಲಿ ಮಾರಾಟ ಮಾಡಲು ಬೈಕ್ನಲ್ಲಿ ಬಂದಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.