ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ನಿನ್ನೆ 184 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 19,232 ಕ್ಕೆ ಏರಿಕೆಯಾಗಿದೆ.
ತುಮಕೂರು ತಾಲೂಕಿನಲ್ಲಿ 58 ಮಂದಿಗೆ ಸೋಂಕು ತಗುಲಿದರೆ, ಚಿಕ್ಕನಾಯಕನಹಳ್ಳಿ 33, ಶಿರಾ ತಾಲೂಕಿನಲ್ಲಿ 25, ತುರುವೇಕೆರೆ ತಾಲೂಕಿನಲ್ಲಿ 19, ತಿಪಟೂರು ತಾಲೂಕಿನಲ್ಲಿ 7, ಪಾವಗಡ ತಾಲೂಕಿನಲ್ಲಿ 8, ಗುಬ್ಬಿ ತಾಲೂಕಿನಲ್ಲಿ 6, ಕೊರಟಗೆರೆ ತಾಲೂಕಿನಲ್ಲಿ 5, ಕುಣಿಗಲ್ ತಾಲೂಕಿನಲ್ಲಿ ಮೂವರಿಗೆ ಸೇರಿದಂತೆ ಒಟ್ಟು 184 ಜನರಿಗೆ ಕೊರೊನಾ ವಕ್ಕರಿಸಿದೆ.