ತುಮಕೂರು: ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಇದುವರೆಗೂ ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಿನಿಂದ ಈವರೆಗೆ ಜಿಲ್ಲೆಯಲ್ಲಿ 14 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ 18 ಬಾಲ್ಯ ವಿವಾಹಕ್ಕೆ ಬ್ರೇಕ್… - tumakuru latest news
ಕೋವಿಡ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಯಾರೂ ಬಾಲ್ಯವಿವಾಹಕ್ಕೆ ಮುಂದಾಗಬಾರದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಪೋಷಕರಲ್ಲಿ ಮನವಿ ಮಾಡಿದ್ದಾರೆ.
![ಲಾಕ್ಡೌನ್ ಸಂದರ್ಭದಲ್ಲಿ 18 ಬಾಲ್ಯ ವಿವಾಹಕ್ಕೆ ಬ್ರೇಕ್… During Lockdown stopped 18 Childhood Wedding…](https://etvbharatimages.akamaized.net/etvbharat/prod-images/768-512-11909269-1027-11909269-1622041170764.jpg)
ಕೋವಿಡ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಯಾರೂ ಬಾಲ್ಯವಿವಾಹಕ್ಕೆ ಮುಂದಾಗಬಾರದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಪೋಷಕರಲ್ಲಿ ಮನವಿ ಮಾಡಿದ್ದಾರೆ. ಕೊರೋನಾ ಲಾಕ್ ಡೌನ್/ಕರ್ಪ್ಯೂ ಸಂದರ್ಭದಲ್ಲಿ ಬಹುತೇಕ ವಿವಾಹಗಳನ್ನು ಮನೆಯ ಹತ್ತಿರ ಮಾಡಲಾಗುತ್ತಿದೆ. ಕೆಲವರು ಈ ವೇಳೆ ಯಾರಿಗೂ ತಿಳಿಯದಂತೆ ಬಾಲ್ಯ ವಿವಾಹವನ್ನು ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಸುಖ ಜೀವನ ಹಾಳಾಗುತ್ತದೆ. ಆದ್ದರಿಂದ ಗಂಡಿಗೆ 21 ಹಾಗೂ ಹೆಣ್ಣಿಗೆ 18 ವರ್ಷ ತುಂಬುವವರೆಗೂ ವಿವಾಹ ಮಾಡಬಾರದು ಎಂದು ತಿಳಿಸಿದ್ದಾರೆ.
ಪೋಷಕರು ಕೋವಿಡ್-19 ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಮಕ್ಕಳಿಗೆ ಬಾಲ್ಯ ವಿವಾಹ ಮಾಡಲು ಮುಂದಾಗಬಾರದು. ಬಾಲ್ಯವಿವಾಹ ಮಾಡುವುದು ಅಪರಾಧ. ಅಪ್ರಾಪ್ತ ಹುಡುಗಿಯನ್ನು ಮದುವೆಯಾಗುವ ಹುಡುಗ, ಪೋಷಕರು ಹಾಗೂ ಪುರೋಹಿತರನ್ನು ಒಳಗೊಂಡಂತೆ ದೂರು ದಾಖಲಿಸಲಾಗುವುದು. ಬಾಲ್ಯವಿವಾಹ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಎರಡು ವರ್ಷ ಜೈಲುವಾಸ, 1,00,000 ರೂ.ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ ಎಚ್ಚರಿಕೆ ನೀಡಿದ್ದಾರೆ.