ಕರ್ನಾಟಕ

karnataka

ETV Bharat / state

ತುಮಕೂರಲ್ಲಿ 1788 ಮಂದಿ ಹೋಂ ಕ್ವಾರಂಟೈನ್​ - 654 ಜನರ ಮೇಲೆ ಶಂಕೆ

ಇದುವರೆಗೂ ಜಿಲ್ಲೆಯಲ್ಲಿ 7 ಮಂದಿಗೆ ಸೋಂಕು ಕಂಡು ಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಒಬ್ಬರು ಗುಣಮುಖರಾಗಿದ್ದು, ನಾಲ್ವರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

'1788'  people are Home Quarantine at tumkur
'ಕಲ್ಪತರು' ನಾಡಿನಲ್ಲಿ '1788 'ಮಂದಿ ಹೋಂ ಕ್ವಾರಂಟೇನ್

By

Published : May 7, 2020, 7:37 PM IST

ತುಮಕೂರು: ಕೊವೀಡ್-19 ಸೋಂಕು ತಡೆಗಟ್ಟುವ ಹಿನ್ನೆಲೆ ಜಿಲ್ಲೆಯಲ್ಲಿ 1,788 ಮಂದಿಯನ್ನು ಹೋಂ ಕ್ವಾರಂಟೈನ್​ನಲ್ಲಿ ಇಡಲಾಗಿದ್ದು, 654 ಮಂದಿಯನ್ನು ಶಂಕಿತರೆಂದು ಗುರುತಿಸಲಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಇಂದು 70 ಜನ ಶಂಕಿತರಿದ್ದು, ಇದುವರೆಗೂ ಜಿಲ್ಲಾದ್ಯಂತ 3547 ಜನರ ಸ್ಯಾಂಪಲ್​ಗಳನ್ನು ಪಡೆಯಲಾಗಿದೆ. ಅದರಲ್ಲಿ 3125 ಮಂದಿಯ ವರದಿ ನೆಗೆಟಿವ್ ಬಂದಿದೆ. ಇನ್ನು 382 ಮಂದಿಯ ವರದಿ ಬರಬೇಕಿದ್ದು, ಈಗಾಗಲೇ 33 ಜನರ ವರದಿ ತಿರಸ್ಕರಿಸಿ ಪುನಃ ಪರೀಕ್ಷೆಗೆ ಕಳುಹಿಸಲಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ 7 ಮಂದಿಗೆ ಸೋಂಕು ತಗುಲಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಒಬ್ಬರು ಗುಣಮುಖರಾಗಿದ್ದು, ನಾಲ್ವರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details