ತುಮಕೂರು:ಜಿಲ್ಲೆಯಲ್ಲಿ ಇಂದು 163 ಮಂದಿಗೆ ಕೊರೊನಾ ಸೋಂಕು ತಗಲಿದ್ದು, ಸೋಂಕಿತರ ಸಂಖ್ಯೆ 12,049 ಕ್ಕೆ ಏರಿಕೆಯಾಗಿದೆ.
ತಾಲೂಕುವಾರು ಕೊರೊನಾ ವಿವರ :ತುಮಕೂರು ತಾಲೂಕಿನಲ್ಲಿ 91 ಮಂದಿಗೆ ಸೋಂಕು ತಗುಲಿದ್ದರೆ, ಶಿರಾ ತಾಲೂಕಿನಲ್ಲಿ 18, ಕುಣಿಗಲ್ ತಾಲೂಕಿನಲ್ಲಿ 16, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 14, ತುರುವೇಕೆರೆ ತಾಲೂಕಿನಲ್ಲಿ 9, ಮಧುಗಿರಿ ತಾಲೂಕಿನಲ್ಲಿ ಐವರಿಗೆ, ಗುಬ್ಬಿ ತಾಲೂಕಿನಲ್ಲಿ ನಾಲ್ವರಿಗೆ, ಕೊರಟಗೆರೆ ತಾಲೂಕಿನಲ್ಲಿ ಮೂವರಿಗೆ , ಪಾವಗಡ ತಾಲೂಕಿನಲ್ಲಿ ಇಬ್ಬರಿಗೆ , ತಿಪಟೂರು ತಾಲೂಕಿನಲ್ಲಿ ಓರ್ವರಿಗೆ ಸೋಂಕು ತಗುಲಿದೆ.
ತುಮಕೂರು ಜಿಲ್ಲೆಯಲ್ಲಿಂದು 163 ಮಂದಿಗೆ ಕೊರೊನಾ ಸೋಂಕು: 267 ಗುಣಮುಖ - Tumkur corona latest news
ತುಮಕೂರು ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೊರೊನಾ ಸೋಂಕು ತಗುಲಿದೆ. ಎಷ್ಟು ಜನರು ಗುಣಮುಖರಾಗಿದ್ದರೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.
![ತುಮಕೂರು ಜಿಲ್ಲೆಯಲ್ಲಿಂದು 163 ಮಂದಿಗೆ ಕೊರೊನಾ ಸೋಂಕು: 267 ಗುಣಮುಖ Tumkur](https://etvbharatimages.akamaized.net/etvbharat/prod-images/768-512-08:19:06:1601131746-kn-tmk-05-covid19report-script-7202233-26092020200252-2609f-02616-646.jpg)
Tumkur
ಗುಣಮುಖ:ಇಂದು 267 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 9,818 ಜನರು ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನೂ 1,951 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರ ಮಾಹಿತಿ :ಇಂದು 6 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 217 ಕ್ಕೆ ಏರಿಕೆಯಾಗಿದೆ.