ಕರ್ನಾಟಕ

karnataka

ETV Bharat / state

ಹೇಮಾವತಿ ನಾಲೆಗಳ ಬಳಿ 144 ಸೆಕ್ಷನ್ ಜಾರಿ: ರಾತ್ರಿ ವೇಳೆ ವಿಶೇಷ ಪೊಲೀಸ್‌ ಗಸ್ತು - ಹೇಮಾವತಿ ಜಲಾಶಯ

ಹೇಮಾವತಿ ಜಲಾಶಯದಿಂದ 2 ಟಿಎಂಸಿಗೂ ಅಧಿಕ ನೀರು ನಾಲೆಗಳ ಮೂಲಕ ಹರಿದು ಬಂದಿದೆ. ಹೀಗಾಗಿ ಈ ನೀರನ್ನು ವ್ಯವಸ್ಥಿತವಾಗಿ ತುಮಕೂರು ಜಿಲ್ಲೆಯ ಎಲ್ಲ ಭಾಗಕ್ಕೂ ಹರಿಸಲು ಜಿಲ್ಲಾಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಇನ್ನೊಂದೆಡೆ, ನಾಲೆಯ ಸಮೀಪ ಯಾವುದೇ ರೀತಿಯ ಗೊಂದಲ ನಿರ್ಮಾಣವಾಗಬಾರದು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿ 144 ಸೆಕ್ಷನ್ ಜಾರಿ ಮಾಡಿದ್ದಾರೆ.

ಹೇಮಾವತಿ ನಾಲೆಗಳ ಬಳಿ 144 ಸೆಕ್ಷನ್ ಜಾರಿ

By

Published : Sep 8, 2019, 7:00 PM IST

ತುಮಕೂರು:ಈಗಾಗಲೇ ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ಸುಮಾರು 2 ಟಿಎಂಸಿಗೂ ಅಧಿಕ ನೀರು ನಾಲೆಗಳ ಮೂಲಕ ಹರಿದು ಬಂದಿದೆ. ಹೀಗೆ ನಾಲೆಯಿಂದ ಹರಿದು ಬರುತ್ತಿರುವ ನೀರನ್ನು ತಮ್ಮ ತೋಟ, ಹೊಲ-ಗದ್ದೆಗಳಿಗೆ ಹರಿಸಿಕೊಳ್ಳಲು ರೈತರು ಮುಂದಾಗಿದ್ದಾರೆ.

ಇನ್ನೊಂದೆಡೆ ಹೇಮಾವತಿ ನಾಲಾ ವ್ಯಾಪ್ತಿಯಲ್ಲಿ ಈ ರೀತಿಯ ಚಟುವಟಿಕೆಗಳನ್ನು ತಡೆಗಟ್ಟುವುದು ಹೇಮಾವತಿ ನಾಲಾ ವಿಭಾಗದ ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಹರಸಾಹಸವಾಗಿದೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹೇಮಾವತಿ ಚಾನಲ್​​ಗಳ ಬಳಿ ವಿಶೇಷ ಪೊಲೀಸ್ ಬಂದೋಬಸ್ತ್​​​ ಏರ್ಪಡಿಸಲಾಗಿದೆ. ನಾಲೆಯ ಡಿಸ್ಟ್ರಿಬ್ಯೂಟರ್ 20 ಮತ್ತು 22 ನ ಸುತ್ತಲೂ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಹೇಮಾವತಿ ನಾಲೆಗಳ ಬಳಿ 144 ಸೆಕ್ಷನ್ ಜಾರಿ

ಸಾಕಷ್ಟು ಪ್ರಮಾಣದಲ್ಲಿ ಹೇಮಾವತಿ ಜಲಾಶಯದಿಂದ ನೀರು ಹರಿಯುತ್ತಿದೆ. ಹೀಗಾಗಿ ಈ ನೀರನ್ನು ವ್ಯವಸ್ಥಿತವಾಗಿ ತುಮಕೂರು ಜಿಲ್ಲೆಯ ಎಲ್ಲಾ ಭಾಗಕ್ಕೂ ಹರಿಸಲು ಜಿಲ್ಲಾಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಇನ್ನೊಂದೆಡೆ ನಾಲೆಯ ಸಮೀಪ ಯಾವುದೇ ರೀತಿಯ ಗೊಂದಲ ನಿರ್ಮಾಣವಾಗಬಾರದು ಎಂಬ ಉದ್ದೇಶದಿಂದ ರಾತ್ರಿ ವೇಳೆ ಪೊಲೀಸರು ನಾಲೆಗಳ ಬಳಿ ಗಸ್ತು ತಿರುಗುತ್ತಿದ್ದಾರೆ.

ABOUT THE AUTHOR

...view details